Saturday, January 23, 2021
Home ಕೋವಿಡ್-19 ಜಗತ್ತಿನಾದ್ಯಂತ 8.18 ಕೋಟಿಗೂ ಹೆಚ್ಚು ಜನರಿಗೆ ಕೋವಿಡ್-19

ಇದೀಗ ಬಂದ ಸುದ್ದಿ

ಜಗತ್ತಿನಾದ್ಯಂತ 8.18 ಕೋಟಿಗೂ ಹೆಚ್ಚು ಜನರಿಗೆ ಕೋವಿಡ್-19

ವಾಷಿಂಗ್ಟನ್‌: ಜಗತ್ತಿನಾದ್ಯಂತ ಈವರೆಗೂ ಒಟ್ಟು 8.18 ಕೋಟಿಗೂ ಹೆಚ್ಚು ಜನರಿಗೆ ಕೋವಿಡ್‌-19 ದೃಢಪಟ್ಟಿದೆ. ಈ ಪೈಕಿ 5.79 ಕೋಟಿ ಸೋಂಕಿತರು ಗುಣಮುಖರಾಗಿದ್ದು, 17.84 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ವರ್ಲ್ಡೊ ಮೀಟರ್ ವೆಬ್‌ಸೈಟ್‌ ವರದಿ ಮಾಡಿದೆ.

ಒಟ್ಟಾರೆ 2.20 ಕೋಟಿಗೂ ಅಧಿಕ ಸಕ್ರಿಯ ಪ್ರಕರಣಗಳಿದ್ದು, ಇದರಲ್ಲಿ 1.05 ಲಕ್ಷಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದೆ.

ಅಮೆರಿಕದಲ್ಲಿ ಕೋವಿಡ್‌ನಿಂದ ಐಸಿಯುಗೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಅಮೆರಿಕದ ಆರೋಗ್ಯ ಇಲಾಖೆ ತಿಳಿಸಿದೆ.

ಕಳೆದ ಸೆಪ್ಟೆಂಬರ್‌ನಲ್ಲಿ ಶೇ 16ರಷ್ಟಿದ್ದ ಈ ಪ್ರಮಾಣ ಡಿಸೆಂಬರ್‌ ಮೂರನೇ ವಾರದ ಅಂತ್ಯಕ್ಕೆ ಶೇ 40ರಷ್ಟಾಗಿದೆ ಎಂದು ಅಂಕಿಅಂಶಗಳು ತಿಳಿಸಿವೆ. ಅಂದರೆ 100 ಜನರಿಗೆ ಕೋವಿಡ್‌ ಸೋಂಕಿದರೆ ಅವರಲ್ಲಿ 40 ಜನರು ಐಸಿಯುಗೆ ದಾಖಲಾಗುತ್ತಿದ್ದಾರೆ ಎಂದು ಅಂಕಿ ಅಂಶಗಳು ತಿಳಿಸಿವೆ.

ಅಮೆರಿಕದಲ್ಲಿ ಒಟ್ಟು 1.97 ಕೋಟಿ ಪ್ರಕರಣಗಳು ದಾಖಲಾಗಿದ್ದು, ಪ್ರಸ್ತುತ 77.49 ಲಕ್ಷ ಸಕ್ರಿಯ ಪ್ರಕರಣಗಳಿವೆ. ಈವರೆಗೂ 3.43 ಲಕ್ಷ ಮಂದಿ ಸಾವಿಗೀಡಾಗಿದ್ದಾರೆ. ಭಾರತದಲ್ಲಿ 2.69 ಲಕ್ಷ ಸಕ್ರಿಯ ಪ್ರಕರಣಗಳು ಹಾಗೂ ಬ್ರೆಜಿಲ್‌ನಲ್ಲಿ 7.46 ಲಕ್ಷ ಸಕ್ರಿಯ ಪ್ರಕರಣಗಳಿವೆ.

ಯುರೋಪ್‌ ರಾಷ್ಟ್ರಗಳನ್ನು ಸೇರಿದಂತೆ ರಷ್ಯಾ ಬ್ರಿಟನ್‌ನಿಂದ ಬರುವ ವಿಮಾನಗಳ ಮೇಲೆ ನಿಷೇಧವೇರಿದೆ. ಏಷ್ಯಾನ್‌ ದೇಶಗಳ ಕೂಡ ಬ್ರಿಟನ್‌ ವಿಮಾನಗಳ ಮೇಲೆ ನಿರ್ಬಂಧ ಹಾಕಿವೆ.

ಜನವರಿಯ ಆರಂಭದಲ್ಲಿ ಬ್ರಿಟನ್‌ನಲ್ಲಿ ವ್ಯಾಕ್ಸಿನ್‌ ಹಾಕುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಇದಾದ ಬಳಿಕ ಭಾರತದಲ್ಲೂ ಲಸಿಕೆ ನೀಡಲಾಗುವುದು ಎಂದು ಸೆರಂ ಲಸಿಕೆ ತಯಾರಿಕ ಸಂಸ್ಥೆಯ ಸಿಇಒ ತಿಳಿಸಿದ್ದಾರೆ. ಸೆರಂ ಕಂಪನಿಯು ಶೇ 50ರಷ್ಟು ಲಸಿಕೆಗಳನ್ನು ಭಾರತಕ್ಕೆ ಮೀಸಲಿಡಲಾಗಿದೆ ಎಂದು ತಿಳಿಸಿದೆ.

ಮೆಕ್ಸಿಕೋದ ಖ್ಯಾತ ಹಾಡುಗಾರ ಹಾಗೂ ಸಂಗೀತ ನಿರ್ದೇಶಕ ಅರ್ಮಾಂಡೊ ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾರೆ.

TRENDING