Wednesday, January 20, 2021
Home ಕೋವಿಡ್-19 ಬೆಂಗಳೂರಿಗೆ ಎಂಟ್ರಿ ಕೊಟ್ಟ ರೂಪಾಂತರಿ ಕೊರೊನಾ : ಮೂವರಲ್ಲಿ ಸೋಂಕು ದೃಢ

ಇದೀಗ ಬಂದ ಸುದ್ದಿ

ಬೆಂಗಳೂರಿಗೆ ಎಂಟ್ರಿ ಕೊಟ್ಟ ರೂಪಾಂತರಿ ಕೊರೊನಾ : ಮೂವರಲ್ಲಿ ಸೋಂಕು ದೃಢ

 ಬೆಂಗಳೂರು: ಭಾರತಕ್ಕೂ ರೂಪಾಂತರ ಕೊರೊನಾ ಸೋಂಕು ಕಾಲಿಟ್ಟಿದ್ದು, ಅದರಲ್ಲೂ ರಾಜ್ಯ ರಾಜಧಾನಿ ಬೇಂಗಳೂರಿನಲ್ಲಿ ಹೊಸ ಪ್ರಭೇದದ ಕೊರೊನಾ ಸೋಂಕು ಹಲವರಲ್ಲಿ ಪತ್ತೆಯಾಗಿದೆ.

ಬ್ರಿಟನ್ ನಿಂದ ಬೆಂಗಳೂರಿಗೆ ಆಗಮಿಸಿರುವ ಮೂವರಲ್ಲಿ ರೂಪಾಂತರ ಕೊರೊನಾ ಸೋಂಕು ಪತ್ತೆಯಾಗಿದೆ. ಬ್ರಿಟನ್ ನಿಂದ ಬಂದಿರುವ ತಾಯಿ ಹಾಗೂ ಮಗಳಲ್ಲಿ ಸೋಂಕು ದೃಢಪಟ್ಟಿದ್ದು, ಸಿಲಿಕಾನ್ ಸಿಟಿ ಜನತೆಯಲ್ಲಿ ಆತಂಕ ಹೆಚ್ಚಿಸಿದೆ.

ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಭಾರತದಲ್ಲಿ ಹೊಸ ಪ್ರಭೇದದ 6 ಕೇಸ್ ಗಳು ಪತ್ತೆಯಾಗಿದ್ದು, ಹೈದರಾಬಾದ್ ನಲ್ಲಿ 2, ಪುಣೆಯಲ್ಲಿ 1, ಬೆಂಗಳೂರಿನಲ್ಲಿ 3 ಸೇರಿದಂತೆ ಒಟ್ಟು 6 ಕೇಸ್ ಗಳು ಪತ್ತೆಯಾಗಿದೆ ಎಂದು ತಿಳಿಸಿದೆ. ಸಂಜೆ ಈ ಬಗ್ಗೆ ಅಧಿಕೃತ ಮಾಹಿತಿ ಪ್ರಕಟವಾಗಲಿದೆ.

TRENDING