Thursday, January 21, 2021
Home ಕೋವಿಡ್-19 ಮಹಾಮಾರಿ ಕೊರೊನಾಗೆ ಹಿಮಾಚಲ ಪ್ರದೇಶದ ಮಾಜಿ ಸಿಎಂ ಶಾಂತಕುಮಾರ್ ಪತ್ನಿ ಬಲಿ!

ಇದೀಗ ಬಂದ ಸುದ್ದಿ

ಮಹಾಮಾರಿ ಕೊರೊನಾಗೆ ಹಿಮಾಚಲ ಪ್ರದೇಶದ ಮಾಜಿ ಸಿಎಂ ಶಾಂತಕುಮಾರ್ ಪತ್ನಿ ಬಲಿ!

ಶಿಮ್ಲಾ: ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಶಾಂತಕುಮಾರ್ ಅವರ ಪತ್ನಿ ಸಂತೋಷ್ ಶೈಲ್ಜಾ ಅವರು ಇಂದು ಬೆಳಗಿನ ಜಾವ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಆರೋಗ್ಯ ಸಚಿವ ರಾಜೀವ್ ಸೈಝಾಲ್, ಕೆಲವು ದಿನಗಳ ಹಿಂದೆಕೊರೊನಾ ವೈರಸ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ರಾಜ್ಯದ ಕಾಂಗ್ರಾ ಜಿಲ್ಲೆಯ ಡಾ.ರಾಜೇಂದ್ರ ಪ್ರಸಾದ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಶೈಲಜಾ ಚಿಕಿತ್ಸೆ ಪಡೆಯುತ್ತಿದ್ದರು.

ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗಿನಜಾವ ಶೈಲಜಾ ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

TRENDING