Friday, January 22, 2021
Home ಜಿಲ್ಲೆ ಶಿರಾ : ಎರಡನೇ ಹಂತದಲ್ಲಿ ಶೇ 85ರಷ್ಟು ಮತದಾನ

ಇದೀಗ ಬಂದ ಸುದ್ದಿ

ಶಿರಾ : ಎರಡನೇ ಹಂತದಲ್ಲಿ ಶೇ 85ರಷ್ಟು ಮತದಾನ

ಶಿರಾ:- ಶಿರಾ ತಾಲ್ಲೂಕಿನ  41 ಗ್ರಾಮ ಪಂಚಾಯಿತಿಗೆ ಎರಡನೇ ಹಂತದ ಮತದಾನ ಭಾನುವಾರ ನಡೆಯಿತು. ಹಲವು ಸಣ್ಣ ಪುಟ್ಟ ಪ್ರಸಂಗಗಳಿಗೆ ಚುನಾವಣೆ ಸಾಕ್ಷಿಯಾಯಿತು. ತಾಲ್ಲೂಕಿನಲ್ಲಿ ಶೇ 85.34ರಷ್ಟು ಮತದಾನ ದಾಖಲಾಯಿತು. ತಾಲ್ಲೂಕಿನ 42 ಗ್ರಾಮ ಪಂಚಾಯಿತಿಗೆ ಭಾನುವಾರ ಮತದಾನ ನಡೆಯಿತು.

ಚುನಾವಣೆಗೆ ಸ್ಪರ್ಧಿಸಿದ 1921 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಿತು. ಮತಪೆಟ್ಟಿಗೆಯನ್ನು ಭದ್ರತಾ ಕೊಠಡಿಗೆ ತಲುಪಿಸುವ ಡಿಮಸ್ಟರಿಂಗ್ ಪ್ರಕ್ರಿಯೆ ನಗರದ ಜ್ಯೋತಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುನಲ್ಲಿ ತಡರಾತ್ರಿಯವರೆಗೆ ನಡೆಯಿತು.

ತಾಲ್ಲೂಕುಗಳ  42 ಕ್ಷೇತ್ರದಿಂದ 660 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿತ್ತು.ಒಂದು ಕ್ಷೇತ್ರದಲ್ಲಿ ಚುನಾವಣೆ ಬಹಿಷ್ಕಾರ ಹಾಕಿದರು. ಉಳಿದಂತೆ 41 ಕ್ಷೇತ್ರದ 660 ಸ್ಥಾನಗಳಿಗೆ ನಾಮಪತ್ರ 1921ಸಲ್ಲಿಕೆಯಾಗಿತ್ತು.  26 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ, 618 ಸ್ಥಾನಗಳಿಗೆ ಮತದಾನ ನಡೆಸಲಾಯಿತು.  ತಾಲ್ಲೂಕಿನಲ್ಲಿ ಶೇ 85.34ರಷ್ಟು ಮತದಾನವಾಗಿದೆ.

ಶನಿವಾರ ಸಂಜೆ ಮತಗಟ್ಟೆ ತಲುಪಿದ್ದ ಸಿಬ್ಬಂದಿ ಮತದಾನಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಭಾನುವಾರ ನಸುಕಿನಿಂದಲೇ ಮತಗಟ್ಟೆ ಸಿದ್ಧ ಮಾಡಿಕೊಳ್ಳಲಾಯಿತು. ಅಭ್ಯರ್ಥಿಗಳು ಹಾಗೂ ಅವರ ಏಜೆಂಟರು ಮತಗಟ್ಟೆ ಪರಿಶೀಲಿಸಿದರು. ಕೆಲ ಅಭ್ಯರ್ಥಿಗಳು ಮತಪೆಟ್ಟಿಗೆ ನಮಸ್ಕರಿಸಿದರು. ಇನ್ನೂ ಕೆಲವೆಡೆ ಮತಪೆಟ್ಟಿಗೆಗೆ ಪೂಜೆ ಮಾಡಲಾಯಿತು. ಬೆಳಿಗ್ಗೆ ನಿಧಾನಗತಿಯಲ್ಲಿ ಆರಂಭವಾದ ಮತದಾನ ಮಧ್ಯಾಹ್ನದ ಬಳಿಕ ಚುರುಕುಗೊಂಡಿತು.

ಹೆಚ್ಚು ಮತದಾರರಿರುವ ಗ್ರಾಮ ಪಂಚಾಯಿತಿಯಲ್ಲಿ ಸಂಜೆ ವೇಳೆಗೆ ಸರತಿ ಸಾಲುಗಳು ಬೆಳೆದಿದ್ದವು. ಕೆಲವೆಡೆ 5 ಗಂಟೆಯ ನಂತರವೂ ಮತದಾನ ನಡೆಯಿತು. ಮತದಾನದ ಅಂಗವಾಗಿ ಗ್ರಾಮಗಳಲ್ಲಿ ಚುನಾವಣೆಯ ಭರಾಟೆ ಜೋರಾಗಿತ್ತು. ಮತಗಟ್ಟೆಯ ಸಮೀಪ ಜನಜಂಗುಳಿ ನಿರ್ಮಾಣವಾಗಿತ್ತು. ಅಭ್ಯರ್ಥಿಗಳು, ಅವರ ಬೆಂಬಲಿಗರು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಗುಂಪು ಸೇರಿದ್ದರು.

ವರದಿ ಶ್ರೀಮಂತ್

ಶಿರಾ ತುಮಕೂರು ಜಿಲ್ಲೆ

TRENDING