ಬೀಜಿಂಗ್: ನೆರೆಯ ಚೀನಾ ಹೊಸ ರಿಮೋಟ್ ಸೆನ್ಸಿಂಗ್ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ ಎಂದು ಚೀನಾದ ಅಧಿಕೃತ ಮಾಧ್ಯಮ ವರದಿ ಮಾಡಿದೆ.
ಭಾನುವಾರ ರಾತ್ರಿ ವಾಯುವ್ಯ ಚೀನಾದ ಜಿಯುಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಈ ಉಪಗ್ರಹವನ್ನು ಉಡಾಯಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ.
ಲಾಂಗ್ ಮಾರ್ಚ್ -4 ಸಿ ರಾಕೆಟ್ ಮೂಲಕ ಯೋಗನ್ -33 ಉಪಗ್ರಹವನ್ನು ನಲ್ಲಿ ಉಡಾಯಿಸಲಾಗಿದ್ದು, ಯೋಜಿತ ಕಕ್ಷೆಗೆ ಯಶಸ್ವಿಯಾಗಿ ಪ್ರವೇಶಿಸಿದೆ. ಇದು ಲಾಂಗ್ ಮಾರ್ಚ್ ಕ್ಯಾರಿಯರ್ ರಾಕೆಟ್ ಸರಣಿಯ 357 ನೇ ಫ್ಲೈಟ್ ಮಿಷನ್ ಎಂದು ವರದಿ ತಿಳಿಸಿದೆ.
ಇದರ ಜೊತೆಗೆ, ಮೈಕ್ರೋ ಮತ್ತು ನ್ಯಾನೊ ತಂತ್ರಜ್ಞಾನ ಪ್ರಯೋಗ ಉಪಗ್ರಹವನ್ನು ಕಕ್ಷೆಗೆ ಕಳುಹಿಸಲಾಗಿದೆ.
ಈ ಎರಡು ಉಪಗ್ರಹಗಳನ್ನು ವೈಜ್ಞಾನಿಕ ಪ್ರಯೋಗಗಳು, ಭೂ ಸಂಪನ್ಮೂಲಗಳ ಸಮೀಕ್ಷೆ ಮತ್ತು ಬೆಳೆ ಇಳುವರಿ ಅಂದಾಜು, ವಿಪತ್ತು ತಡೆಗಟ್ಟುವಿಕೆ ದೃಷ್ಟಿಯಿಂದ ಬಳಸಿಕೊಳ್ಳಲಾಗುತ್ತದೆ.