Saturday, January 23, 2021
Home ಸುದ್ದಿ ಜಾಲ ವಾಹನ ಸವಾರರೇ ಗಮನಿಸಿ : ಜನವರಿ 1 ರಿಂದ ಎಲ್ಲಾ ವಾಹನಗಳಿಗೆ ಪಾಸ್ಟ್ಯಾಗ್ ಕಡ್ಡಾಯ

ಇದೀಗ ಬಂದ ಸುದ್ದಿ

ವಾಹನ ಸವಾರರೇ ಗಮನಿಸಿ : ಜನವರಿ 1 ರಿಂದ ಎಲ್ಲಾ ವಾಹನಗಳಿಗೆ ಪಾಸ್ಟ್ಯಾಗ್ ಕಡ್ಡಾಯ

 ನವದೆಹಲಿ: 2021 ರ ಜನವರಿ 1 ರಿಂದ ಜಾರಿಗೆ ಬರುವಂತೆ ದೇಶದ ಎಲ್ಲ 4 ಚಕ್ರದ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯಗೊಳಿಸಲಾಗಿದೆ. ನಗದು ಪಾವತಿ, ಸಮಯ, ಇಂಧನ ಉಳಿತಾಯದ ಜೊತೆಗೆ ಟೋಲ್ ಪ್ಲಾಜಾಗಳಲ್ಲಿ ವಾಹನಗಳು ನಿಲ್ಲುವುದನ್ನು ತಪ್ಪಿಸಲು ಈ ಕ್ರಮಕೈಗೊಳ್ಳಲಾಗಿದೆ. ಇನ್ನಮುಂದೆ ಟೋಲ್ ಪ್ಲಾಜಾಗಳಲ್ಲಿ ನಿಲ್ಲುವ, ಕಾಯುವ ಅಗತ್ಯವಿರುವುದಿಲ್ಲ ಎನ್ನಲಾಗಿದೆ.

ಜನವರಿ 1 ರಿಂದ ಹಳೆಯ ವಾಹನಗಳು ಸೇರಿದಂತೆ ಎಲ್ಲಾ 4 ಚಕ್ರದ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯಗೊಳಿಸುವ ನಿರ್ಧಾರವನ್ನು ಹಿಂದೆಯೇ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕೈಗೊಂಡಿದೆ. ಸಚಿವಾಲಯದಿಂದ ಫಾಸ್ಟ್ಯಾಗ್ ಗಳ ಮೂಲಕ ಡಿಜಿಟಲ್ ಮತ್ತು ಐಟಿ ಆಧಾರಿತ ಶುಲ್ಕವನ್ನು ಪಾವತಿಸಲು ಅಧಿಸೂಚನೆ ಹೊರಡಿಸಲಾಗಿತ್ತು.

ಜನವರಿ 1 ರಿಂದ ಹಳೆಯ ವಾಹನಗಳಲ್ಲಿಯೂ ಲಭ್ಯವಾಗುವಂತೆ ಫಾಸ್ಟ್ಯಾಗ್ ಕಡ್ಡಾಯಗೊಳಿಸಲಾಗಿದೆ. ಸಾರಿಗೆ ವಾಹನಗಳಿಗೆ ಫಾಸ್ಟ್ಯಾಗ್ ಅಳವಡಿಸಿದ ನಂತರವೇ ಫಿಟ್ನೆಸ್ ಪ್ರಮಾಣಪತ್ರದ ನವೀಕರಣ ಮಾಡಲಾಗುವುದು ಎಂದು ಹೇಳಲಾಗಿದೆ

TRENDING