Sunday, January 24, 2021
Home ಜಿಲ್ಲೆ ಕೊಪ್ಪಳ ಕುರುಬ ಎಸ್. ಟಿ ಮೀಸಲಾತಿ ಹೋರಾಟಕ್ಕೆ ಸಿದ್ದರಾಮಯ್ಯನವರ ಬೆಂಬಲವಿದೆ : ರಾಜ್ಯಾಧ್ಯಕ್ಷ ...

ಇದೀಗ ಬಂದ ಸುದ್ದಿ

ಕುರುಬ ಎಸ್. ಟಿ ಮೀಸಲಾತಿ ಹೋರಾಟಕ್ಕೆ ಸಿದ್ದರಾಮಯ್ಯನವರ ಬೆಂಬಲವಿದೆ : ರಾಜ್ಯಾಧ್ಯಕ್ಷ ಕೆ. ವಿರೂಪಾಕ್ಷಪ್ಪ

ಕೊಪ್ಪಳ : ಕುರುಬರ ಎಸ್ ಟಿ ಮೀಸಲಾತಿ ಹೋರಾಟಕ್ಕೆ ಸಿದ್ದರಾಮಯ್ಯನವರ ಸಂಪೂರ್ಣ ಬೆಂಬಲವಿದೆ, ಅವರ ಒಪ್ಪಿಗೆ ತಗೆದುಕೊಂಡೇ ನಾವು ಈ  ಹೋರಾಟ ಕೈಗೊಂಡಿದ್ದೇವೆ ಅಂತ ಮಾಜಿ ಸಂಸದ ಹಾಗೂ  ಕುರುಬರ ಎಸ್ ಟಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕೆ ವಿರೂಪಾಕ್ಷಪ್ಪ ಹೇಳಿದ್ದಾರೆ.

ಕೊಪ್ಪಳ ಜಿಲ್ಲೆಯ ಕುಕನೂರ್ ನಲ್ಲಿ ನಮ್ಮ ಪ್ರತಿನಿಧಿಯೊಂದಿಗೆ ಮಾತನಾಡಿದ ಕೆ ವಿರೂಪಾಕ್ಷಪ್ಪ, ಸಿದ್ದರಾಮಯ್ಯನವರು  ಈಚೆಗೆ ಎಸ್ ಟಿ ಮೀಸಲಾತಿ ಹೋರಾಟದ ಮೂಲಕ   ಆರ್ ಎಸ್ ಎಸ್ ನವರು ಮತ್ತು ಕೆ ಎಸ್ ಈಶ್ವರಪ್ಪ ನಮ್ಮ  ಸಮಾಜ ಒಡೆಯುತ್ತಿದ್ದಾರೆ ಎಂದು ಆರೋಪಿಸಿದ್ದರು ಎಂಬ ಪ್ರಶ್ನೆಗೆ  ಕುರುಬ ಸಮಾಜದ ಎಸ್ ಟಿ ಮೀಸಲಾತಿ ಹೋರಾಟಕ್ಕೂ ಆರ್ ಎಸ್ ಎಸ್ ನವರಿಗೂ ಯಾವುದೇ ಸಂಬಂಧವಿಲ್ಲ,

ಹಾಗಂತ ಯಾರ ಬೆಂಬಲವನ್ನೂ ನಿರಾಕರಿಸುವುದಿಲ್ಲ ನಮಗೆ ಬಿಜೆಪಿ ಯಾದರೂ ಅಷ್ಟೇ ಕಾಂಗ್ರೆಸ್ ಆದರೂ ಅಷ್ಟೇ ಆರ್ ಎಸ್ ಎಸ್ ಆದರೂ ಅಷ್ಟೇ ನಮ್ಮ ಸಮಾಜದ ಹಿತ ಮತ್ತು ಎಸ್ ಟಿ ಮೀಸಲಾತಿ ಒಂದೇ ನಮ್ಮ ಗುರಿ  ನಮ್ಮ ಹೋರಾಟಕ್ಕೆ ಯಾರೇ ಬೆಂಬಲ ಕೊಟ್ಟರೂ ಸ್ವಾಗತ ಎಂದರು.

ಎಸ್ ಟಿ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ  ಜನೆವರಿ 15 ರಿಂದ ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ  ಪಾದಯಾತ್ರೆ   ಹಮ್ಮಿಕೊಂಡಿದ್ದು ಫೆಬ್ರವರಿ 7 ರಂದು ಬೆಂಗಳೂರಲ್ಲಿ ನಡೆಯುವ ಬೃಹತ್ ಸಮಾವೇಶ ದ ಮೂಲಕ ಸರ್ಕಾರದ ಮೇಲೆ ಒತ್ತಡ ತರುತ್ತೇವೆ ಎಂದು ಕೆ ವಿರೂಪಾಕ್ಷಪ್ಪ  ತಿಳಿಸಿದರು.

ಈರಯ್ಯ ಕುರ್ತಕೋಟಿ

ದಿ ನ್ಯೂಸ್ 24

ಕೊಪ್ಪಳ

TRENDING