Saturday, January 23, 2021
Home ಸುದ್ದಿ ಜಾಲ ವಿದೇಶಕ್ಕೆ ತೆರಳಿದ ರಾಹುಲ್ ಗಾಂಧಿ

ಇದೀಗ ಬಂದ ಸುದ್ದಿ

ವಿದೇಶಕ್ಕೆ ತೆರಳಿದ ರಾಹುಲ್ ಗಾಂಧಿ

ನವದೆಹಲಿಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಮ್ಮ ಸಣ್ಣ ವೈಯಕ್ತಿಕ ಪ್ರವಾಸಕ್ಕಾಗಿ ವಿದೇಶಕ್ಕೆ ತೆರಳಿದ್ದಾರೆ.

ಆದರೆ, ರಾಹುಲ್ ಗಾಂಧಿಯ ಭೇಟಿ ಕುರಿತಾದ ಯಾವುದೇ ಮಾಹಿತಿಯನ್ನು ಕಾಂಗ್ರೆಸ್ ಬಿಟ್ಟುಕೊಟ್ಟಿಲ್ಲ. ಕೆಲ ದಿನವರೆಗೆ ರಾಹುಲ್ ಗಾಂಧಿ ದೇಶದ ಹೊರಗಿರಲಿದ್ದಾರೆ ಎಂದಷ್ಟೇ ಪಕ್ಷದ ಪ್ರಧಾನ ವಕ್ತಾರ ರಣದೀಪ್ ಸುರ್ಜೇವಾಲಾ ತಿಳಿಸಿದ್ದಾರೆ.

“ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅಲ್ಪಾವಧಿಯ ವೈಯಕ್ತಿಕ ಭೇಟಿಗಾಗಿ ವಿದೇಶಕ್ಕೆ ತೆರಳಿದ್ದಾರೆ ಮತ್ತು ಕೆಲವು ದಿನಗಳವರೆಗೆ ಹೊರಗಡೆ ಇರುತ್ತಾರೆ,” ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ. ರಾಹುಲ್ ಗಾಂಧಿ ಎಲ್ಲಿಗೆ ತೆರಳಿದ್ದಾರೆ ಎಂದು ಪ್ರಶ್ನಿಸಿದಾಗಲೂ ಸುರ್ಜೇವಾಲಾ ಯಾವುದೇ ಮಾಹಿತಿ ಹೊರಹಾಕಿಲ್ಲ.

ಮೂಲಗಳ ಪ್ರಕಾರ, ಅವರ ಅಜ್ಜಿ ಇಟಲಿಯಲ್ಲಿ ನೆಲೆಸಿದ್ದು, ಅವರನ್ನು ನೋಡಲು ಬೆಳಿಗ್ಗೆ ಖತಾರ್ ಏರ್‌ವೇಸ್ ವಿಮಾನದ ಮೂಲಕ ಇಟಲಿಯ ಮಿಲನ್‌ಗೆ ತೆರಳಿದ್ದಾರೆ. ಈ ಹಿಂದೆಯೂ ಅಲ್ಲಿಗೆ ರಾಹುಲ್ ಗಾಂಧಿಗೆ ಭೇಟಿ ನೀಡಿದ್ದರು.

ಸೋಮವಾರ ಕಾಂಗ್ರೆಸ್ ನ 136 ನೇ ಸಂಸ್ಥಾಪನಾ ದಿನಾಚರಣೆ ನಡೆಯಲಿದ್ದು, ಇದಕ್ಕೂ ಮುನ್ನವೇ ರಾಹುಲ್ ಗಾಂಧಿ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಈ ದಿನ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಕೇಂದ್ರ ಕಚೇರಿಯಲ್ಲಿ ಪಕ್ಷದ ಧ್ವಜವನ್ನು ಹಾರಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ.

TRENDING