Saturday, January 16, 2021
Home ಸುದ್ದಿ ಜಾಲ ಅಂಚೆ ಇಲಾಖೆಯಲ್ಲಿ ಖಾಲಿಯಿರುವ 2,443 ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದೀಗ ಬಂದ ಸುದ್ದಿ

ಅಂಚೆ ಇಲಾಖೆಯಲ್ಲಿ ಖಾಲಿಯಿರುವ 2,443 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೋಲಾರ : ಭಾರತೀಯ ಅಂಚೆ ಇಲಾಖೆ, ಕರ್ನಾಟಕ ಅಂಚೆ ವೃತ್ತವು ಕರ್ನಾಟಕದಲ್ಲಿರುವ 2,443 ಗ್ರಾಮೀಣ ಅಂಚೆ ನೌಕರರ ಹುದ್ದೆಗಳನ್ನು ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ತಮ್ಮ ಹೆಸರನ್ನು https://appost.in/gdsonline ರಲ್ಲಿ ವೆಬ್‍ಸೈಟ್ ಮೂಲಕ ನೊಂದಾಯಿಸಬಹುದಾಗಿದೆ. ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಹೊಂದಿರಬೇಕು. 18 ರಿಂದ 40 ವರ್ಷಗೊಳಗಾಗಿದ್ದು, ಅನುಸೂಚಿತ ಜಾತಿ, ಬುಡಕಟ್ಟು, ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಅರ್ಜಿಗಳನ್ನು ಜನವರಿ 20, 2021 ರೊಳಗಾಗಿ ಸಲ್ಲಿಸಬಹುದಾಗಿದೆ. ಹಿಂದುಳಿದ ವರ್ಗ ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 100 ರೂ ಯಾಗಿದ್ದು, ರಾಜ್ಯದ ಯಾವುದೇ ಮುಖ್ಯ ಅಂಚೆ ಕಛೇರಿಯಲ್ಲಿ ಅಥವಾ ಆಯ್ದ ಅಂಚೆ ಕಛೇರಿಗಳ ಕೌಂಟರ್‍ಗಳಲ್ಲಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಪೋಸ್ಟ್ ಮಾಸ್ಟರ್ ಜನರಲ್ ಬೆಂಗಳೂರು ಮುಖ್ಯ ಕಾರ್ಯಾಲಯ ದೂರವಾಣಿ ಸಂಖ್ಯೆ 080-22392599, ದಕ್ಷಿಣ ಕರ್ನಾಟಕ ವಲಯ ದೂರವಾಣಿ ಸಂಖ್ಯೆ 9481455606, ಉತ್ತರ ಕರ್ನಾಟಕ ವಲಯ ದೂರವಾಣಿ ಸಂಖ್ಯೆ 0836-2740454, ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಕರ್ನಾಟಕ ವೃತ್ತ ದೂರವಾಣಿ ಸಂಖ್ಯೆ 080-22392544 ಹಾಗೂ ವೆಬ್‍ಸೈಟ್ ವಿಳಾಸ http://appost.in/gdsonline ಗೆ ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಅವರು ತಿಳಿಸಿದ್ದಾರೆ.

  ತಾಜಾ ಸುದ್ದಿಗಾಗಿ ನಮ್ಮ WhatAapp, Telegram ಗ್ರೂಪ್‌ ಹಾಗೂ ಫೇಸ್ ಬುಕ್ ಫೇಜ್ ಸೇರಿಕೊಳ್ಳಿ
 https://bit.ly/2Md4kxL
 https://t.me/kannadanewsnow
 https://www.facebook.com/kannadanewsnowdotcom

TRENDING