Monday, January 18, 2021
Home ಸುದ್ದಿ ಜಾಲ ಜಮ್ಮು,ಕಾಶ್ಮೀರ : ದೇವಾಲಯದ ಮೇಲೆ ನಡೆಯಬೇಕಿದ್ದ ಉಗ್ರರ ದಾಳಿ ತಡೆದ ಭದ್ರತಾ ಸಿಬ್ಬಂದಿ

ಇದೀಗ ಬಂದ ಸುದ್ದಿ

ಜಮ್ಮು,ಕಾಶ್ಮೀರ : ದೇವಾಲಯದ ಮೇಲೆ ನಡೆಯಬೇಕಿದ್ದ ಉಗ್ರರ ದಾಳಿ ತಡೆದ ಭದ್ರತಾ ಸಿಬ್ಬಂದಿ

ಪೂಂಚ್, ಡಿ. 27: ಜಮ್ಮು ಮತ್ತು ಕಾಶ್ಮೀರದಲ್ಲಿವ ದೇವಾಲಯದ ಮೇಲೆ ನಡೆಯಬಹುದಾಗಿದ್ದ ಉಗ್ರ ದಾಳಿಯನ್ನು ಭದ್ರತಾ ಸಿಬ್ಬಂದಿ ತಡೆದಿದ್ದಾರೆ.

ಎಸ್‌ಎಸ್ ಪಿ ರಮೇಶ್ ಕುಮಾರ್ ಅಂಗ್ರಾಲ್ ಈ ಬಗ್ಗೆ ಮಾಹಿತಿ ನೀಡಿದ್ದು ವಿಶೇಷ ಕಾರ್ಯಪಡೆ ತಂಡ 49 ರಾಷ್ಟ್ರೀಯ ರೈಫಲ್ಸ್ ನಡೆಸುತ್ತಿದ್ದ ಕಾರ್ಯಾಚರಣೆ ವೇಳೆ ಮುಸ್ತಾಫಾ ಇಕ್ಬಾಲ್ ಹಾಗೂ ಮುರ್ತಾಜಾ ಇಕ್ಬಾಲ್ ಎಂಬುವವರನ್ನು ಬಂಧಿಸಿದ್ದು, ಮುಸ್ತಾಫಾನಿಗೆ ಪಾಕಿಸ್ತಾನದಿಂದ ಕರೆ ಬಂದಿತ್ತು ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ಪೂಂಚ್ ನಲ್ಲಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಶಂಕಿತರನ್ನು ಬಂಧಿಸಲಾಗಿದ್ದು, ಆರು ಗ್ರೆನೇಡ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಈ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಅವರಿಗೆ ಅರಿ ಗ್ರಾಮದಲ್ಲಿರುವ ದೇವಾಲಯದ ಮೇಲೆ ಬಾಂಬ್ ದಾಳಿ ನಡೆಸುವ ಟಾರ್ಗೆಟ್ ನೀಡಲಾಗಿತ್ತು ಎಂಬುದನ್ನು ಒಪ್ಪಿಕೊಂಡಿದ್ದು ಗ್ರೆನೇಡ್ ನ್ನು ಹೇಗೆ ಬಳಕೆ ಮಾಡಬೇಕೆಂಬುದರ ಬಗ್ಗೆ ಮಾಹಿತಿಯನ್ನೊಳಗೊಂಡ ವಿಡಿಯೋವನ್ನೂ ಫೋನ್ ಗೆ ಕಳಿಸಲಾಗಿತ್ತು ಎಂಬ ಮಾಹಿತಿ ಬಹಿರಂಗಪಡಿಸಿದ್ದಾರೆ. ಆರೋಪಿಗಳ ಹೇಳಿಕೆಯ ಆಧಾರದಲ್ಲಿ ನಡೆಸಿದ ತಪಾಸಣೆ ನಡೆಸಿದಾಗ 6 ಗ್ರೆನೇಡ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಇಂದು ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯಲ್ಲಿ ಐವರು ನಕ್ಸಲರನ್ನು ಬಂಧನಕ್ಕೊಳಪಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಐವರು ನಕ್ಸಲರು ತೃತೀಯ ಪ್ರಸ್ತುತಿ ಸಮಿತಿಗೆ ಸೇರಿದವರಾಗಿದ್ದಾರೆ. ಬಂಧಿತರಿಂದ ಜೀವಂತ ಗುಂಡುಗಳು, ರೈಫಲ್ ಹಾಗೂ ಪಿಸ್ತೂಲುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಗುಮ್ಲಾ ಎಸ್’ಪಿ ಜನಾರ್ಧನನ್ ಅವರು ಹೇಳಿದ್ದಾರೆ.

ಬಂಧಿತ ಉಗ್ರರು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಮಾಹಿತಿಗಳು ಬಂದಿವೆ. ಕಾರ್ಯಾಚರಣೆ ವೇಳೆ ಮತ್ತಷ್ಟು ನಕ್ಸಲರು ತಪ್ಪಿಸಿಕೊಂಡಿದ್ದಾರೆಂಬ ಮಾಹಿತಿಗಳಿವೆ ಎಂದಿದ್ದಾರೆ.

TRENDING