Tuesday, January 26, 2021
Home ಸುದ್ದಿ ಜಾಲ ಎಚ್ಚರ..! ಇಂತಹ 'ಹಾಲು ಸೇವನೆ'ಯಿಂದ ನಿಮ್ಮ ಆರೋಗ್ಯಕ್ಕೂ ಅಪಾಯ.!

ಇದೀಗ ಬಂದ ಸುದ್ದಿ

ಎಚ್ಚರ..! ಇಂತಹ ‘ಹಾಲು ಸೇವನೆ’ಯಿಂದ ನಿಮ್ಮ ಆರೋಗ್ಯಕ್ಕೂ ಅಪಾಯ.!

ಬೆಂಗಳೂರು : ರಾಜ್ಯದಲ್ಲಿ ಜಾನುವಾರುಗಳ ದೇಹದ ಮೇಲೆ ಮಚ್ಚೆಗಳಾಗುತ್ತಿರುವುದು ಒಂದೆಡೆಯಾದ್ರೇ… ಅನೇಕ ಕಡೆಗಳಲ್ಲಿ ಹಸುಗಳಿಗೆ ಬಾಯಲ್ಲಿ ಹುಣ್ಣು ಆಗುವ ಮೂಲಕ, ಮತ್ತೊಂದು ರೀತಿಯ ರೋಗದಿಂದ ಬಳಲುತ್ತಿವೆ. ಇದರ ಮಧ್ಯೆ ಆತಂಕಕಾರಿ ಅಂಶ ಮಾಹಿತಿಯೊಂದು ಹೊರಬಿದ್ದಿದ್ದು, ಹೆಚ್ಚು ಹೆಚ್ಚು ಹಾಲು ಕೊಡಲಿ ಎನ್ನುವ ಕಾರಣಕ್ಕಾಗಿ ಹಸುಗಳಿಗೆ ಹುದುಗಿದ (ಫರ್ಮೆಂಟ್) ಆಹಾರದಿಂದ ರಾಸುಗಳಲ್ಲಿ ನಾಲಿಗೆ ಹುಣ್ಣು ಆಗುತ್ತಿದೆ. ಇಂತಹ ಹಾಲು ಕುಡಿದ್ರೇ.. ಮನುಷ್ಯನ ಆರೋಗ್ಯದ ಮೇಲೂ ದುಷ್ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.

ಹೌದು.. ಕಡಿಮೆ ಖರ್ಚಿನಲ್ಲಿ ಹೆಚ್ಚು ಹಾಲು ಉತ್ಪಾದಿಸುವ ಸಲುವಾಗಿ ಅನೇಕ ಹೈನುಗಾರಿಕೆ ನಿರತರು, ಹಸುಗಳಿಗೆ ಬ್ರಿವರಿ ಕಾರ್ಖಾನೆಗಳು ಬಿಯರ್ ತಯಾರಿಸಿದ ಬಳಿಕ, ಉಳಿಯುವ ಹುದುಗಿದ ಜೋಳ, ಬಾರ್ಲಿ, ಓಟ್ಸ್ ತ್ಯಾಜ್ಯವನ್ನು ಕಡಿಮೆ ಬೆಲೆಗೆ ಖರೀದಿಸುತ್ತಿದ್ದಾರೆ. ಹೀಗೆ ಖರೀದಿಸುತ್ತಿರುವಂತ ಹುದುಗಿದ ಜೋಳ, ಬಾರ್ಲಿ, ಓಟ್ಸ್ ತ್ಯಾಜ್ಯವನ್ನು ಹಸುಗಳಿಗೆ ನೀಡುತ್ತಿದ್ದಾರೆ. ಇದರಿಂದಾಗಿ ಹಸುಗಳಲ್ಲಿ ಕಾಲುಬಾಯಿ ಜ್ವರ ಉಂಟಾಗಿ, ನಾಲಿಗೆ ಹುಣ್ಣು ಕೂಡ ಆಗುತ್ತಿದೆಯಂತೆ.

ಇದಷ್ಟೇ ಆಗಿದ್ದರೇ ಆತಂಕ ಪಡಬೇಕಿರಲಿಲ್ಲ. ಇದಲ್ಲದೇ ಮಳೆಗಾಲದಲ್ಲಿ ಸರಿಯಾಗಿ ಒಣಗಿಸದಂತ ಧಾನ್ಯಗಳು ಬೂಸ್ಟ್ ಬಂದು, ಅಂತಹ ಧಾನ್ಯಗಳನ್ನು ಉಪಯೋಗಿಸಲು ಆಗದೇ, ಧನಗಳಿಗೆ ಆಹಾರವಾಗಿ ನೀಡಲಾಗುತ್ತಿದೆ. ಇದರಿಂದಲೂ ರಾಸುಗಳಿಗೆ ಜ್ವರ ಬಂದು, ನಾಲಿಗೆ ಹುಣ್ಣಾಗುತ್ತಿದೆ ಎನ್ನಲಾಗುತ್ತಿದೆ.

ಅಂದಹಾಗೇ ಇದೆಲ್ಲಾ ಹೇಗೆ ತಿಳಿತು..? ಇದರಿಂದ ಏನ್ ತೊಂದ್ರೆ ಆಗುತ್ತದೆ.? ಯಾಕೆ ಹಾಲು ಕುಡಿಯಬಾರದು ಅಂತ ಯೋಚಿಸ್ತಾ ಇದ್ದೀರಾ.? ಯಾಕ್ ಅಂದ್ರೇ.. ನಾಲಿಗೆಯಲ್ಲಿ ಹುಣ್ಣಾದಂತ ಹಸುಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸಿದಂತ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ವಿಷಶಾಸ್ತ್ರ ಪ್ರಯೋಗಾಲಯದ ಡಾ.ಲೋಹಿತ್ ಹಾಗೂ ಡಾ.ಗೌತಮ್, ಹುಣ್ಣುಗಳಿಗೆ ಕಾರಣವಾಗಿದ್ದು ಶಿಲೀಂಧ್ರಯುಕ್ತ ಆಹಾರ ನೀಡಿದ್ದರಿಂದ ಆಗಿದೆ. ಇದರಲ್ಲಿ ಅಪ್ಲೊಟಾಕ್ಸಿನ್ ಬಿ1 ಪ್ರಮಾಣ ಕೆಜಿಗೆ 147.59 ಮೈಕ್ರೋ ಗ್ರಾಂ ನಷ್ಟು ಅಧಿಕವಾಗಿದೆ. ಇದು ಕ್ಯಾನ್ಸರ್ ಕಾರಕವೂ ಆಗಬಹುದು ಎಂಬುದಾಗಿ ತಿಳಿಸಿದ್ದಾರೆ.

ಹೀಗೆ ಕ್ಯಾನ್ಸರ್ ಕಾರಕ ಆಹಾರ ಪದಾರ್ಥವನ್ನು ತಿನ್ನುವ ರಾಸುಗಳು ಕೂಡ ಅನಾರೋಗ್ಯದಿಂದ ಬಳಲುತ್ತವೆ. ಅಪ್ಲೊಟಾಕ್ಸಿನ್ ಬಿ1 ಪಚನಗೊಂಡ ನಂತ್ರ ಅಪ್ಲೊಟಾಕ್ಸಿನ್ ಎಂ1 ಆಗಿ ಪರಿವರ್ತನೆಗೊಳ್ಳುತ್ತದೆ. ಇದು 12 ಗಂಟೆಯೊಳಗೆ ಹಾಲಿನ ಮೂಲಕ ಹೊರಬರುತ್ತದೆ. ಇಂತಹ ಹಾಲನ್ನು ಸೇವಿಸೋದ್ರಿಂದ ಮನುಷ್ಯನ ದೇಹದ ಮೇಲೆ ಪರಿಣಾಮ ಬೀರುತ್ತದೆ ಎಂಬುದಾಗಿ ವೈದ್ಯರು ಎಚ್ಚರಿಸಿದ್ದಾರೆ.

TRENDING