Wednesday, January 20, 2021
Home ಸುದ್ದಿ ಜಾಲ ಕೃಷಿ ಕಾಯ್ದೆಗೆ ವಿರೋಧ: 100 ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆ

ಇದೀಗ ಬಂದ ಸುದ್ದಿ

ಕೃಷಿ ಕಾಯ್ದೆಗೆ ವಿರೋಧ: 100 ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆ

ಅಹಮದಾಬಾದ್, ಡಿ. 27: ಕೇಂದ್ರದ ಕೃಷಿ ಕಾಯ್ದೆಗೆ ವಿರೋಧಿಸಿ 100 ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.

ಗುಜರಾತ್‌ನ ನಭಿಪುರ ಜಿಲ್ಲೆ 9 ಹಳ್ಳಿಯ 100 ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.ನಭಿಪುರ ಜಿಲ್ಲಾ ಪಂಚಾಯತ್ ಸದಸ್ಯ ಶಕೀಲ್ ಅಕುಜಿ ನೇತೃತ್ವದಲ್ಲಿ ಪರಿಮಲ್ಸಿಂಹ ರಾಣಾ ಅವರ ನೇತೃತ್ವದಲ್ಲಿ ಭರೂಚ್‌ನ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರು ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದಾರೆ.

ಈ ಕುರಿತು ಭರೂಚ್‌ನ ಜಿಲ್ಲಾ ಘಟಕದ ಮುಖ್ಯಸ್ಥ ಮಾರುತಿ ಸಿನ್ಹ್ ಆಟೋದರಿಯಾ, ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 100 ಮಂದಿ ಬಿಜೆಪಿ ಕಾರ್ಯಕರ್ತರು ಸೇರಿಕೊಂಡಿದ್ದಾರೆ ಎಂದು ನನಗೆ ತಿಳಿದಿಲ್ಲ, ಆದರೆ ಬಿಜೆಪಿಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವವರು ಕಾಂಗ್ರೆಸ್‌ಗೆ ಸೇರಿಕೊಂಡಿಲ್ಲ ಎಂದು ಹೇಳಿದರು.

ಹೊಸದಾಗಿ ಪಕ್ಷವನ್ನು ಸೇರಿದವರಲ್ಲಿ ಶೇ.70ಕ್ಕಿಂತ ಜನರು ಸ್ಥಳೀಯ ಪಾಟೀದಾರ್ ಪಟೇಲರು ಪಟೇಲರು ಉಪ್ರಾಲಿ, ಸ್ಯಾಮ್ಲೋಡ್, ದಭಾಲಿ, ಕವಿತಾ, ಭರ್ತಾನಾ, ಪಿಪಾಲಿಯಾ, ಕರೇಲಾ, ಉಮ್ರಾ ಗ್ರಾಮಗಳಿಗೆ ಸೇರಿದ್ದು, ಉಳಿದವರು ಬುಡಕಟ್ಟು ಜನಾಂಗದವರಾಗಿದ್ದಾರೆ.

ಉಪ್ರಾಲಿ ಗ್ರಾಮದ ಮಾಜಿ ಸರ್ಪಂಚ್ ಮಹೇಶ್ ಪಾಟೀಲ್ , 35 ವರ್ಷಗಳಿಂದ ಬಿಜೆಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು, ಆದರೆ ಈಗ ಕೇಂದ್ರ ಜಾರಿಗೆ ತಂದಿರುವ ಮೂರು ಹೊಸ ಕೃಷಿ ಕಾನೂನುಗಳನ್ನು ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ.

TRENDING