Sunday, January 24, 2021
Home ರಾಜ್ಯ ತೀವ್ರ ಕುತೂಹಲ ಕೆರಳಿಸಿದ 'ಹೆಚ್ ಡಿ ಕೆ -ಸಿಎಂ ಇಬ್ರಾಹಿಂ'ಭೇಟಿ.!

ಇದೀಗ ಬಂದ ಸುದ್ದಿ

ತೀವ್ರ ಕುತೂಹಲ ಕೆರಳಿಸಿದ ‘ಹೆಚ್ ಡಿ ಕೆ -ಸಿಎಂ ಇಬ್ರಾಹಿಂ’ಭೇಟಿ.!

ಬೆಂಗಳೂರು : ಕಳೆದ ಇತ್ತೀಚೆಗಷ್ಟೇ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ನಿಂದ ದೂರ ಉಳಿದಿದ್ದಂತ ಸಿಎಂ ಇಬ್ರಾಹಿಂ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದರು. ಇದಾದ ಬಳಿಕ, ಸಿಎಂ ಇಬ್ರಾಹಿಂ ಕೂಡ ಕುಮಾರಸ್ವಾಮಿ ಭೇಟಿಯ ನಂತ್ರ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಅವರನ್ನು ಭೇಟಿ ಮಾಡಿದ್ದರು. ಜೆಡಿಎಸ್ ಸೇರ್ತಾರೆ ಅಂತಾನೂ ಸುದ್ದಿಯಾಗಿತ್ತು. ಇದೀಗ ಮತ್ತೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರು ಎರಡನೇ ಬಾರಿ ಭೇಟಿಯಾಗಿದ್ದಾರೆ. ಹೀಗಾಗಿ, ಇದೀಗ ಮತ್ತಷ್ಟು ತೀವ್ರ ಕುಮಾರಸ್ವಾಮಿ-ಸಿಎಂ ಇಬ್ರಾಹಿಂ ಭೇಟಿ ಕುತೂಹಲ ಮೂಡಿಸಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತರಲ್ಲಿ ಒಬ್ಬರಾಗಿ ಗುರ್ತಿಸಿಕೊಂಡಿದ್ದಂತ ಸಿಎಂ ಇಬ್ರಾಹಿಂ, ಕೆಲ ದಿನಗಳಿಂದ ಕಾಂಗ್ರೆಸ್ ನಿಂದ ದೂರವಾಗಿ, ಸೈಲೆಂಟ್ ಆಗಿದ್ದರು. ಇಂತಹ ಸಿಎಂ ಇಬ್ರಾಹಿಂ ಅವರನ್ನು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಭೇಟಿಯಾಗಿ, ಮಾತುಕತೆ ನಡೆಸಿದ್ದರು. ಇದಾದದ ಬಳಿಕ ಸಿಎಂ ಇಬ್ರಾಹಿಂ ಅವರೇ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಈ ಎಲ್ಲಾ ಬೆಳವಣಿಗೆಯ ನಂತ್ರ, ಇದೀಗ ಮತ್ತೆ ಎರಡನೇ ಬಾರಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರು ಸಿಎಂ ಇಬ್ರಾಹಿಂ ಅವರ ಬೆಂಗಳೂರಿನ ನಿವಾಸಕ್ಕೆ ಭೇಟಿಯಾಗಿ, ಮಾತುಕತೆ ನಡೆಸಿದ್ದಾರೆ. ಹೀಗಾಗಿ ಸಿಎಂ ಇಬ್ರಾಹಿಂ ಕಾಂಗ್ರೆಸ್ ತೊರೆದು, ಜೆಡಿಎಸ್ ಸೇರಲಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. ಆದ್ರೇ ಆ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

TRENDING