Tuesday, January 26, 2021
Home ಸುದ್ದಿ ಜಾಲ ರೈತರ ಪ್ರತಿಭಟನೆ; ಬಿಜೆಪಿ ತೊರೆದ ಮಾಜಿ ಸಂಸದ ಹರಿಂದರ್ ಸಿಂಗ್ ಖಾಲ್ಸಾ

ಇದೀಗ ಬಂದ ಸುದ್ದಿ

ರೈತರ ಪ್ರತಿಭಟನೆ; ಬಿಜೆಪಿ ತೊರೆದ ಮಾಜಿ ಸಂಸದ ಹರಿಂದರ್ ಸಿಂಗ್ ಖಾಲ್ಸಾ

 ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಭಾರತೀಯ ಜನತಾ ಪಕ್ಷವು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಮಾಜಿ ಸಂಸದ ಹರಿಂದರ್ ಸಿಂಗ್ ಖಾಲ್ಸಾ, ಬಿಜೆಪಿ ಪಕ್ಷವನ್ನು ತೊರೆದಿದ್ದಾರೆ.

73 ವರ್ಷದ ಖಾಲ್ಸಾ 2014ರಲ್ಲಿ ಫತೇರ್‌ಗಡದಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಲೋಕಸಭೆಗೆ ಚುನಾಯಿತಗೊಂಡಿದ್ದರು. ಆದರೆ ಪಕ್ಷ ವಿರೋಧಿ ಚಟುವಟಿಕೆಗಳಿಂದಾಗಿ ಎಎಪಿಯಿಂದ ಅಮಾನತುಗೊಂಡಿದ್ದರು. ಬಳಿಕ 2019ರಲ್ಲಿ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದರು.

ಅಂದೋಲನದಲ್ಲಿ ನಿರತವಾಗಿರುವ ರೈತರಿಗೆ ಬಿಜೆಪಿ ನಾಯಕತ್ವವು ಸರಿಯಾದ ಸ್ಪಂದನೆ ತೋರುತ್ತಿಲ್ಲ ಎಂದು ಹರಿಂದರ್ ಸಿಂಗ್ ಆರೋಪಿಸಿದ್ದಾರೆ. ರೈತರ ವಿರುದ್ದ ವಿಭಿನ್ನ ನಿಲುವು ತಳೆದಿರುವುದರಿಂದ ಬಿಜೆಪಿಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದರು.

ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ ರೈತರು, ಕಳೆದೊಂದು ತಿಂಗಳಿನಿಂದ ದೆಹಲಿ ಗಡಿಯ ವಿವಿಧ ಪ್ರದೇಶಗಳಲ್ಲಿ ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಮಧ್ಯೆ ಪ್ರತಿಭಟನಾನಿರತ ರೈತರು ಡಿಸೆಂಬರ್ 29ರಂದು ಸರ್ಕಾರದ ಜೊತೆಗೆ ಮಾತುಕತೆ ನಡೆಸಲಿದ್ದಾರೆ. ಮಾತುಕತೆಗೆ ಬರುವಂತೆ ಪ್ರಧಾನಿ ಮನವಿಯನ್ನು ಪರಿಗಣಿಸಿ ಚರ್ಚೆ ನಡೆಸಲು ಸಿದ್ಧವಾಗಿದ್ದಾರೆ.

TRENDING