Monday, January 25, 2021
Home ದೆಹಲಿ ಆದಾಯ ತೆರಿಗೆದಾರರಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ಮಾಹಿತಿ

ಇದೀಗ ಬಂದ ಸುದ್ದಿ

ಆದಾಯ ತೆರಿಗೆದಾರರಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ಮಾಹಿತಿ

ನವದೆಹಲಿ : ಆದಾಯ ತೆರಿಗೆದಾರರಿಗೆ ಕೇಂದ್ರ ಸರ್ಕಾರವು ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ವೆರಿಫಿಕೇಷನ್ ಪ್ರಕ್ರಿಯೆಯನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಆದಾಯ ತೆರಿಗೆ ಇಲಾಖೆಯು ಹೊಸ ಫೈಲಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಹೊಸ ಇ-ಫೈಲಿಂಗ್ ವ್ಯವಸ್ಥೆಯ ಆಧಾರ್ ಸಂಖ್ಯೆ, ಇಂಟರ್ ನೆಟ್ ಬ್ಯಾಂಕಿಂಗ್, ಎಟಿಎಂ ಅಥವಾ ಇಮೇಲ್ ಮೂಲಕ ವ್ಯಕ್ತಿಯ ಐಟಿಆರ್ ಅನ್ನು ಆನ್ ಲೈನ್ ನಲ್ಲಿ ವೆರಿಫಿಕೇಷನ್ ಮಾಡಲು ಅವಕಾಶ ನೀಡುತ್ತದೆ.

ಬ್ಯಾಂಕ್ ಎಟಿಎಂ ಮೂಲಕ ಐಟಿಆರ್ ವೆರಿಫಿಕೇಶನ್ ಮಾಡುವುದು ಹೇಗೆ?

ಬ್ಯಾಂಕ್ ಎಟಿಎಂ ಮೂಲಕ ಐಟಿಆರ್ ವೆರಿಫಿಕೇಶನ್ ಮಾಡಲು ಬಯಸುವವರು ತಮ್ಮ ಹತ್ತಿರದ ಎಟಿಎಂ ಶಾಖೆಗೆ ಭೇಟಿ ನೀಡಿ.
ಈಗ ಎಟಿಎಂ ಕಾರ್ಡ್ ಅನ್ನು ಎಟಿಎಂ ಯಂತ್ರದಲ್ಲಿ ಹಾಕಿ ಪಿನ್ ನಂಬರ್ ಟೈಪ್ ಮಾಡಿ. ಇ-ಫೈಲಿಂಗ್ ಗಾಗಿ ಪಿನ್ ಎಂಬ ಆಯ್ಕೆಯನ್ನು ಕಾಣಬಹುದಾಗಿದೆ.
ಗ್ರಾಹಕನ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಕೋಡ್ ಅನ್ನು ಜನರೇಟ್ ಮಾಡಲು .
ಈ ಕೋಡ್ 72 ಗಂಟೆಗಳ ಕಾಲ ಚಾಲ್ತಿಯಲ್ಲಿರಲಿದೆ.
ಈಗ, ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಹೋಗಿ.
ನನ್ನ ಖಾತೆ ಆಯ್ಕೆಯನ್ನು .
ಈಗ ‘ಇ-ವೆರಿಫಿಕೇಶನ್’ ಆಯ್ಕೆ ಯನ್ನು ಮತ್ತು ನಿಮ್ಮ ಮೊಬೈಲ್ ನಂಬರ್ ಗೆ ನೀವು ಪಡೆದ ಕೋಡ್ ಅನ್ನು ಹಾಕಿ.

ಕೋವಿಡ್-19 ರ ಹಿನ್ನೆಲೆಯಲ್ಲಿ, 2019-20ನೇ ಸಾಲಿನ ಎಲ್ಲಾ ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ದಿನಾಂಕವನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿದೆ.

ತೆರಿಗೆ ಪಾವತಿದಾರರು 2019-20ನೇ ಸಾಲಿನ (ಎವೈ 2020-21) ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸಲಿದ್ದಾರೆ. ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ ಸೈಟ್ https://www.incometaxindiaefiling.gov.in ಗೆ ಹೋಗುವ ಮೂಲಕ ನೀವು ಸುಲಭವಾಗಿ ನಿಮ್ಮ ಐಟಿಆರ್ ರಿಟರ್ನ್ ಫೈಲ್ ಮಾಡಬಹುದು.

TRENDING