ವಿಶ್ವದಾದ್ಯಂತ 2 ಬಿಲಿಯನ್ ಬಳಕೆದಾರರಿಗಾಗಿ ವಾಟ್ಸಾಪ್ ಈ ವರ್ಷ ಸಾಕಷ್ಟು ಫೀಚರ್ ಗಳನ್ನು ಬಿಡುಗಡೆ ಮಾಡಿ ಸುದ್ದಿಯಲ್ಲಿತ್ತು. ಫೇಸ್ ಬುಕ್ ಮಾಲೀಕತ್ವದ ಮೆಸೇಜಿಂಗ್ ಆಪ್ ನಿಂದ ಡಾರ್ಕ್ ಮೋಡ್ ಫೀಚರ್, ಮಾಯವಾಗುವ ಸಂದೇಶಗಳ ಆಯ್ಕೆ, ವಾಟ್ಸ್ ಆಪ್ ಬ್ಯುಸಿನೆಸ್ ಆಪ್ ವರ್ಧಕಗಳು ಮತ್ತು ಇನ್ನೂ ಹಲವು ಫೀಚರ್ ಗಳನ್ನು ಈ ವರ್ಷ ಕಾಣಬಹುದಾಗಿದೆ.
ಈ ನಡುವೆ 2021ರಲ್ಲಿ ವಾಟ್ಸಾಪ್ ಹಲವು ಸ್ಮಾರ್ಟ್ ಫೋನ್ ಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಲಿದೆ. ಫೇಸ್ ಬುಕ್ ಮಾಲೀಕತ್ವದ ಮೆಸೇಜಿಂಗ್ ಅಪ್ಲಿಕೇಶನ್ ನ FAQ ಬೆಂಬಲ ಪುಟದಲ್ಲಿ ಅಪ್ ಡೇಟ್ ಆಗಿರುವಂತೆ, ಹಲವಾರು ಆಂಡ್ರಾಯ್ಡ್ ಮತ್ತು ಐಓಎಸ್ ಫೋನ್ ಗಳು ಆಪ್ ಕೆಲಸ ಮಾಡದೇ ಸಾಧ್ಯವಾಗದೇ ಇರಬಹುದು, ಏಕೆಂದರೆ ಮುಂದಿನ ವರ್ಷದಿಂದ OS ನ ಹಳೆಯ ಆವೃತ್ತಿಗಳಿಗೆ ಬೆಂಬಲವನ್ನು ಕಂಪನಿ ಹಿಂತೆಗೆದುಕೊಳ್ಳುತ್ತದೆ.ವಾಟ್ಸಾಪ್ FAQ ವಿಭಾಗದ ಮಾಹಿತಿಪ್ರಕಾರ, ಆಂಡ್ರಾಯ್ಡ್ 4.0.3 ಆಪರೇಟಿಂಗ್ ಸಿಸ್ಟಂ ಅಥವಾ ಹೊಸಐಫೋನ್ ಗಳು ಚಾಲನೆಯಲ್ಲಿರುವ ಫೋನ್ ಗಳಿಗೆ ಮಾತ್ರ ಹೊಂದಿಕೆಯಾಗುತ್ತದೆ ಮತ್ತು ಐಓಎಸ್ 9 ಮತ್ತು ಹೊಸದರಲ್ಲಿ ಕಾರ್ಯನಿರ್ವಹಿಸುತ್ತದೆ ಅಂತ ತಿಳಿಸಿದೆ.ಆಂಡ್ರಾಯ್ಡ್ ಫೋನ್ ಗಳಿಗೆ, HTC Designo, LG ಆಪ್ಟಿಮಸ್ ಬ್ಲಾಕ್, ಮೋಟೋರೋಲಾ ಡ್ರಾಯ್ಡ್ ರೇಜರ್ ಅಥವಾ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್2 ಸೇರಿದಂತೆ ಮಾಡೆಲ್ ಗಳಲ್ಲಿ ಇನ್ನು ಮುಂದೆ ವಾಟ್ಸಾಪ್ ವರ್ಕ್ ಆಗೋದಿಲ್ಲ.
ಐಫೋನ್ ಗಳಿಗೆ, ಐಫೋನ್ 4 ಮತ್ತು ಹಿಂದಿನ ಮಾಡೆಲ್ ಗಳಲ್ಲಿ ಶೀಘ್ರದಲ್ಲೇ ವಾಟ್ಸಾಪ್ ಅನ್ನು ಬೆಂಬಲಿಸುವುದಿಲ್ಲ. 4S, 5, 5S, 5C, 6 ಮತ್ತು 6S ಮಾಡೆಲ್ ಗಳು ತಮ್ಮ ಆಪರೇಟಿಂಗ್ ಸಿಸ್ಟಮ್ ಅನ್ನು ಐಒಎಸ್ 9 ಅಥವಾ ನಂತರ ದಲ್ಲಿ ಅಪ್ ಡೇಟ್ ಮಾಡಿ ವಾಟ್ಸಾಪ್ ಬಳಕೆಯನ್ನು ಮುಂದುವರೆಸಬೇಕಾಗುತ್ತದೆ.