Sunday, January 24, 2021
Home ಕೋವಿಡ್-19 ದೆಹಲಿಯ 150 ಸೇನಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್

ಇದೀಗ ಬಂದ ಸುದ್ದಿ

ದೆಹಲಿಯ 150 ಸೇನಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್

ನವದೆಹಲಿಗಣರಾಜ್ಯೋತ್ಸವ ಮತ್ತು ಸೇನಾ ದಿನದ ಮೆರವಣಿಗೆಯಲ್ಲಿ ಭಾಗವಹಿಸಲು ದೇಶದ ವಿವಿಧೆಡೆಯಿಂದ ಕಳೆದ ವಾರ ದೆಹಲಿಗೆ ಆಗಮಿಸಿದ್ದ 150 ಸೇನಾ ಸಿಬ್ಬಂದಿಗೆ ಕೋವಿಡ್ 19 ಸೋಕು ತಗುಲಿರುವುದು ಧೃಡಪಟ್ಟಿದೆ.

ಎರಡು ಮೆರವಣಿಗೆಯಲ್ಲಿ ಭಾಗವಹಿಸುವ ಎಲ್ಲ ಸಿಬ್ಬಂದಿಯ ಸುರಕ್ಷತೆ ದೃಷ್ಟಿಯಿಂದ ರೂಪಿಸಲಾದ ಕಟ್ಟುನಿಟ್ಟಾದ ಪ್ರೋಟೋಕಾಲ್ ಅಡಿ ಕೋವಿಡ್ 19 ಕಡ್ಡಾಯ ಪರೀಕ್ಷೆಯ ಸಮಯದಲ್ಲಿ ಸೇನಾ ಸಿಬ್ಬಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ನವೆಂಬರ್ ಮಾಸಾಂತ್ಯದಿಂದ 2,000ಕ್ಕೂ ಅಧಿಕ ಸೇನಾ ಸಿಬ್ಬಂದಿ ಗಣರಾಜ್ಯೋತ್ಸವ ಮತ್ತು ಸೇನಾ ದಿನದ ಮೆರವಣಿಗೆಯಲ್ಲಿ ಭಾಗವಹಿಸಲು ವಿವಿಧ ಸಾರಿಗೆ ಮೂಲಕ ದೆಹಲಿಗೆ ಆಗಮಿಸಿದ್ದಾರೆ. ಅವರನ್ನು ಸುರಕ್ಷಿತ ಚೌಕಟ್ಟಿಗೆ ಸೇರಿಸುವ ಮುನ್ನ ಅವರೆಲ್ಲರೂ ಕೋವಿಡ್ 19 ಪರೀಕ್ಷೆಗೆ ಒಳಪಡಬೇಕಿದೆ. ಯಾರಿಗೆಲ್ಲ ಕೋವಿಡ್ 19 ನೆಗೆಟಿವ್ ಬಂದಿದೆಯೋ ಅವರನ್ನೆಲ್ಲ ಮೆರವಣಿಗೆಯಲ್ಲಿ ಭಾಗವಹಿಸುವ ಸೇನಾ ಸಿಬ್ಬಂದಿ ಉಳಿದುಕೊಳ್ಳಲೆಂದೇ ವ್ಯವಸ್ಥೆ ಮಾಡಲಾಗಿರುವ ಸುರಕ್ಷಿತ ಪ್ರದೇಶ(ಸೇಫ್ ಬಬಲ್)ಕ್ಕೆ ಕಳುಹಿಸಲಾಗುತ್ತದೆ.

ಕಂಟೋನ್ಮೆಂಟ್ ಪ್ರದೇಶದಲ್ಲಿ ಸೇಫ್ ಬಬಲ್ ವ್ಯವಸ್ಥೆ ಮಾಡಲಾಗಿದ್ದು, ಈ ವಿಶಾಲ ಕ್ಯಾಂಪಸ್‌ನಲ್ಲಿ ಉಳಿಯುವ ಸೇನಾ ಸಿಬ್ಬಂದಿ ಗಣರಾಜ್ಯೋತ್ಸವದ ಆಚರಣೆ ಮುಗಿಯುವವರೆಗೂ ಹೊರಜಗತ್ತಿನ ಜೊತೆ ಸಂಪರ್ಕ ಹೊಂದಿರುವುದಿಲ್ಲ. ಜನವರಿ 15ಕ್ಕೆ ಸೇನಾ ದಿನ ಆಚರಣೆ ಮಾಡಲಾಗುತ್ತಿದ್ದು, ಕೋವಿಡ್ 19 ಪಾಸಿಟಿವ್ ಬಂದಿರುವ ಸೇನಾ ಸಿಬ್ಬಂದಿ ಅಷ್ಟರೊಳಗೆ ಚೇತರಿಸಿಕೊಂಡು ಸೇಫ್ ಬಬಲ್ ಸೇರಬಹುದಾಗಿದೆ

TRENDING