Friday, January 22, 2021
Home ಕೋವಿಡ್-19 ಕೊರೊನಾ ಫೇಕ್ ರಿಪೋರ್ಟ್ ಸಲ್ಲಿಸಿ ಪೇಚಿಗೆ ಬಿದ್ದ ಬಿಜೆಪಿ ಶಾಸಕ ರಾಕೇಶ್ ಸಿಂಗ್ ಬಘೇಲ್!

ಇದೀಗ ಬಂದ ಸುದ್ದಿ

ಕೊರೊನಾ ಫೇಕ್ ರಿಪೋರ್ಟ್ ಸಲ್ಲಿಸಿ ಪೇಚಿಗೆ ಬಿದ್ದ ಬಿಜೆಪಿ ಶಾಸಕ ರಾಕೇಶ್ ಸಿಂಗ್ ಬಘೇಲ್!

ಲಖನೌ: ಸರ್ಕಾರ ತಮ್ಮದೇ ಇದೆ, ಏನು ಮಾಡಿದರೂ ಅರಗಿಸಿಕೊಳ್ಳಬಹುದೆಂಬ ಬಿಜೆಪಿ ಶಾಸಕನ ಲೆಕ್ಕಾಚಾರ ತಪ್ಪಿಹೋಗಿದೆ. ಕೋರ್ಟ್​ಗೆ ಹಾಜರಾಗಬೇಕಾಗಿದ್ದ ಶಾಸಕ, ಕೋವಿಡ್ 19 ಫೇಕ್ ರಿಪೋರ್ಟ್​ ಸಲ್ಲಿಸಿ ಇದೀಗ ಪೇಚಿಗೆ ಸಿಲುಕಿದ್ದಾರೆ.

ಮೆಂಹದಾವಲ್ ಕ್ಷೇತ್ರದ ಶಾಸಕ ರಾಕೇಶ್​ ಸಿಂಗ್ ಬಘೇಲ್ ಆರೋಪಿ. ಇದೀಗ ಶಾಸಕ ಬಘೇಲ್ ಜತೆಗೆ ನಕಲಿ ವರದಿ ಕೊಟ್ಟ ಸಂತ ಕಬೀರ್​ನಗರದ ಚೀಫ್ ಮೆಡಿಕಲ್ ಆಫೀಸರ್ ಡಾಕ್ಟರ್​ ಹರಗೋವಿಂದ್ ಸಿಂಗ್ ವಿರುದ್ಧವೂ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಶಾಸಕ ಬಘೇಲ್​ 2010ರಲ್ಲಿ ನಡೆದ ಕೊಲೆಯತ್ನ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಪ್ರಕರಣಕ್ಕೆ ಸಂಬಂಧಿಸಿ ಎಂಪಿ/ಎಂಎಲ್​ಎ ಕೋರ್ಟ್​ಗೆ ವಿಚಾರಣೆಗೆ ಹಾಜರಾಗಬೇಕಾಗಿತ್ತು. ಆದರೆ, ಶಾಸಕ ಬಘೇಲ್ ಅತಿಬುದ್ಧಿವಂತಿಕೆ ಪ್ರದರ್ಶಿಸಿ ಫೇಕ್ ಕೋವಿಡ್ 19 ರಿಪೋರ್ಟ್​ ಅನ್ನು ಕೋರ್ಟಿಗೆ ಸಲ್ಲಿಸಿದ್ದರು. ಹೆಚ್ಚುವರಿ ಸೆಷನ್ಸ್​ ಜಡ್ಜ್ ದೀಪಂತ್ ಮಣಿ ಸಮನ್ಸ್ ಜಾರಿಗೊಳಿಸಿದ್ದರು.

ಶಾಸಕ ಬಘೇಲ್ ಇದೇ ಮೊದಲ ಬಾರಿ 2017 ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸಿದವರು. ಲಖನೌನ್​ ಗೋಮತಿ ನಗರದ ನಿವಾಸಿ. ಇದೀಗ ಶಾಸಕ ಬಘೇಲ್ ಮತ್ತು ಸಿಎಂಒ ವಿರುದ್ಧ ಪೋರ್ಜರಿ ಕೇಸ್ ದಾಖಲಾಗಿದೆ.

TRENDING