Tuesday, January 19, 2021
Home ಸುದ್ದಿ ಜಾಲ ವಾಹನ ಸವಾರರಿಗೆ ಮತ್ತೊಂದು ಸಿಹಿ ಸುದ್ದಿ: 2021ರ ಮಾರ್ಚ್‌ವರೆಗೂ ಡಿಎಲ್ ಸಿಂಧುತ್ವ ಅವಧಿ ವಿಸ್ತರಣೆ

ಇದೀಗ ಬಂದ ಸುದ್ದಿ

ವಾಹನ ಸವಾರರಿಗೆ ಮತ್ತೊಂದು ಸಿಹಿ ಸುದ್ದಿ: 2021ರ ಮಾರ್ಚ್‌ವರೆಗೂ ಡಿಎಲ್ ಸಿಂಧುತ್ವ ಅವಧಿ ವಿಸ್ತರಣೆ

 ನವದೆಹಲಿಚಾಲನಾ ಪರವಾನಗಿ (ಡಿಎಲ್‌) ಮಾನ್ಯತೆ ಅವಧಿ ಮುಕ್ತಾಯಗೊಂಡಿದ್ದರೂ 2021ರ ಮಾರ್ಚ್‌ 31ರ ವರೆಗೂ ಅದರ ಸಿಂಧುತ್ವ ಅವಧಿ ವಿಸ್ತರಣೆಯಾಗಲಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.

ಕೋವಿಡ್-19 ಹರಡುವಿಕೆ ತಡೆಯುವ ಪ್ರಯತ್ನದ ಭಾಗವಾಗಿ ಸರ್ಕಾರ ಈ ಕ್ರಮ ಕೈಗೊಂಡಿದ್ದು, ಈ ಸಂಬಂಧ ಕೇಂದ್ರ ಸಾರಿಗೆ ಸಚಿವಾಲಯಗಳು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ರವಾನಿಸಿದೆ.

ನೋಂದಣಿ ಪ್ರಮಾಣ ಪತ್ರ (ಆರ್‌ಸಿ), ಡಿಎಲ್‌, ಪರ್ಮಿಟ್‌ಗಳು, ಫಿಟ್ನೆಸ್‌ ಸರ್ಟಿಫಿಕೆಟ್‌ ಸೇರಿದಂತೆ ಮೋಟಾರು ವಾಹನ ಕಾಯ್ದೆ ಮತ್ತು ಕೇಂದ್ರ ವಾಹನ ನಿಯಮಕ್ಕೆ ಸಂಬಂಧಿಸಿದ ದಾಖಲೆಗಳ ಸಿಂಧುತ್ವದ ಅವಧಿ ವಿಸ್ತರಿಸಿರುವ ಮಾಹಿತಿಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಭಾನುವಾರ ತಿಳಿಸಿದೆ. 2020ರ ಫೆಬ್ರುವರಿ 1ರಿಂದ ಮಾನ್ಯತೆ ಅವಧಿ ಮುಕ್ತಾಯಗೊಂಡಿರುವ ದಾಖಲೆಗಳಿಗೆ ಇದು ಅನ್ವಯವಾಗಲಿದೆ.

ಈ ವರ್ಷ ಮಾರ್ಚ್‌ನಿಂದ ಸಾರಿಗೆ ಸಚಿವಾಲಯವು ನಾಲ್ಕನೇ ಬಾರಿಗೆ ವಾಹನ ದಾಖಲೆಗಳ ಸಿಂಧುತ್ವ ಅವಧಿ ವಿಸ್ತರಿಸಿ ನಿರ್ದೇಶನ ನೀಡಿದೆ.

TRENDING