ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ಬಂಗಾರವ್ವ ಕಟ್ಟಿ ಸಭಾಂಗಣದಲ್ಲಿ ನೇಕಾರರಿಗೂ ಮೀಸಲಾತಿ ನೀಡಬೇಕೆಂದು ನೇಕಾರರ ಮಹತ್ವ ಸಭೆ ನಡೆಯಿತು.
ನೇಕಾರರ ಸಮುದಾಯ ಸಂಪೂರ್ಣ ಹಿಂದುಳಿದ ಸಮಾಜವಾಗಿದೆ ಶಿಕ್ಷಣಿಕ ಮತ್ತು ರಾಜಕೀಯವಾಗಿ ಸಂಪೂರ್ಣ ಹಿಂದು ಬಿದ್ದಿದೆ ಕೂಡಲೇ ಸರ್ಕಾರ ನಮ್ಮ ನೇಕಾರರ ಕೂಗನ್ನು ಪರಿಗಣನೆ ಮಾಡಿ ನೇಕಾರ ಸಮುದಾಯವನ್ನು ಬೆಳೆಯಲು ಪ್ರವರ್ಗ-1 ಮೀಸಲಾತಿಯನ್ನು ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಸರ್ಕಾರದಿಂದ ಇಲ್ಲಿಯವರೆಗೂ ಒಂದೇ ಒಂದು ಸೌಲಭ್ಯ ನೇಕಾರರ ಸಮುದಾಯಕ್ಕೆ ದೊರಕಿಲ್ಲ ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ನೇಕಾರರ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ನೇಕಾರರ ಮುಖಂಡ ಮನೋಹರ ಶಿರೋಳ ಒತ್ತಾಯಿಸಿದರು.
ನೇಕಾರ ಮುಖಂಡ ಶಂಕರ್ ಸೊರಗಾವಿ ಮಾತನಾಡಿ :
ನಮ್ಮ ನೇಕಾರ ಸಮುದಾಯಕ್ಕೆ ಮೀಸಲಾತಿಯನ್ನು ನೀಡಲೇಬೇಕು ಕರ್ನಾಟಕ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೇಕಾರಿಕೆಯ ವೃತ್ತಿಯನ್ನು ನಂಬಿಕೊಂಡು ಬದುಕನ್ನು ಸಾಧಿಸುತ್ತಿದ್ದಾರೆ.
ಆದ್ದರಿಂದ ಸರ್ಕಾರ ಕೂಡಲೇ ನಮ್ಮ ನೇಕಾರರ ಸಮುದಾಯಕ್ಕೆ ಮೀಸಲಾತಿಯನ್ನು ನೀಡಬೇಕೆಂದು ಹೇಳಿದರು.
ಬನಹಟ್ಟಿ ನೂಲಿನ ಗಿರಣಿ ಉಳಿವಿಗಾಗಿ ಸರ್ಕಾರ ಒಂದಿಷ್ಟು ಹಣವನ್ನು ನೀಡಿ. ಇದನ್ನೇ ನಂಬಿಕೊಂಡು ಕೆಲಸ ಮಾಡುವ ಕಾರ್ಮಿಕರು ಬದುಕಿ ಉಳಿಯುತ್ತಾರೆ ಮತ್ತು ಸುಗಮ ದಿಂದ ನೂಲಿನ ಗಿರಣಿ ಮುನ್ನಡೆಸಬಹುದು ಎಂದರು.
ಇದೇ ಸಂದರ್ಭದಲ್ಲಿ ನೇಕಾರರ ಮುಖಂಡರಾದ ಶ್ರೀಶೈಲ ದಬಾಡಿ. ದುಂಡಪ್ಪ ಮಾಚಕನೂರ. ರಾಮಣ್ಣ ಹುಲಕುಂದ. ಹಟ್ಟಿಸರ. ಶಂಕರ ಸೊರಗಾವಿ. ಶಂಕರ ಜಾಲಿಗಿಡದ. ಶಂಕರ ಜುಂಜಪ್ಪನವರ. ನಗರಸಭೆ ಅಧ್ಯಕ್ಷ ರಮೇಶ ಬಿಳಗಿ .ಓಂಪ್ರಕಾಶ ಬಾಗೇವಾಡಿ. ಶ್ರೀನಿವಾಸ ಬಳ್ಳಾರಿ. ಶೇಖರ ಹಕ್ಕಲದಡ್ಡಿ ಬಸವರಾಜ. ಜಯಪ್ರಕಾಶ ಸೊಲ್ಲಾಪುರ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ದಿ ನ್ಯೂಸ್ 24 ಕನ್ನಡ
ಬಾಗಲಕೋಟೆ