Tuesday, January 26, 2021
Home ಸುದ್ದಿ ಜಾಲ ಹಿರಿಯ ಸಾಹಿತಿ, ಪತ್ರಕರ್ತ `ನಾ.ಸು. ಭರತನಹಳ್ಳಿ' ನಿಧನ

ಇದೀಗ ಬಂದ ಸುದ್ದಿ

ಹಿರಿಯ ಸಾಹಿತಿ, ಪತ್ರಕರ್ತ `ನಾ.ಸು. ಭರತನಹಳ್ಳಿ’ ನಿಧನ

ಯಲ್ಲಾಪುರ : ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಸಾಹಿತಿ, ಪತ್ರಕರ್ತ ನಾ.ಸು. ಭರತನಹಳ್ಳಿ (84) ಶುಕ್ರವಾರ ನಿಧನರಾಗಿದ್ದಾರೆ.

ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ನಾ.ಸು. ಭರತನಹಳ್ಳಿ ಅವರನ್ನು ಶಿರಸಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಸೊಸೆ, ಮೂವರು ಪುತ್ರಿಯರು ಮೊಮ್ಮಕಳಿದ್ದಾರೆ.

ಬಯಲು ಬೆತ್ತಲೆ’ ಕಥಾ ಸಂಕಲನ, ಭೂಮಿಕೆ, ಪರಿವೃತ ಕಾದಂಬರಿಗಳು, ಅವಾಂತರ ನಾಟಕ, ಆಕಾಶ ಹರಿದು ಬೀಳುತ್ತದೆ, ಪಂಜರದಲ್ಲಿ ಹುಲಿ, ರೊಬೊಟೊ ಮತ್ತು ಇತರ ಚಿಹ್ನೆಗಳು ಮಕ್ಕಳ ನಾಟಕಗಳುನ್ನು ಬರೆದಿದ್ದಾರೆ.

ತಾಲಿಬಾನ್ ಅಪಘಾನ್ ಮತ್ತು ನಾನು ಅನುವಾದ ಕೃತಿ, ಪೂರ್ವತಟದಿ ಪುಟ್ಟ ವಿಶ್ವ ಪ್ರವಾಸಿ ಕಥೆ, ಗೌರೀಶ ಕಾಯ್ಕಿಣಿ ಬದುಕು ಬರಹ ಸಾಹಿತ್ಯ ಪರಿಷತ್ತು ಪ್ರಕಟಣೆ, ಪರಂಪರೆ ಅಂಕಣ ಬರಹ ಸೇರಿದಂತೆ 30 ಕ್ಕೂ ಹೆಚ್ಚು ಕೃತಿಗಳನ್ನು ಹೊರತಂದಿದ್ದಾರೆ.

TRENDING