Saturday, January 23, 2021
Home ರಾಜಕೀಯ JDS ಪಕ್ಷವನ್ನ ಯಾರೂ ಅಲುಗಾಡಿಸಲು ಸಾಧ್ಯವಿಲ್ಲ - ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ

ಇದೀಗ ಬಂದ ಸುದ್ದಿ

JDS ಪಕ್ಷವನ್ನ ಯಾರೂ ಅಲುಗಾಡಿಸಲು ಸಾಧ್ಯವಿಲ್ಲ – ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ

 ಬೆಂಗಳೂರು: ತೆನೆ ಹೊತ್ತ ಮಹಿಳೆ ಬಗ್ಗೆ ಏನೇನೋ ಮಾತಾಡಬಾರದು, ಈ ಪಕ್ಷವನ್ನ ಯಾರೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಜೆಡಿಎಸ್​ ವರಿಷ್ಠ, ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಅವರು ಶನಿವಾರ ಹೇಳಿದರು.

ಜೆಪಿ ಭವನದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸೋಲು-ಗೆಲುವು ಸಹಜ. ನಾನು ಕಾಂಗ್ರೆಸ್ ಬಗ್ಗೆ ಮಾತಾಡಿದ್ರೆ ತುಂಬಾ ಮಾತಾಡ್ತೀನಿ. ಕಾಂಗ್ರೆಸ್ ಬಗ್ಗೆ ನನಗೆ ಗೊತ್ತಿದೆ. ಕಾಂಗ್ರೆಸ್ ಮುಕ್ತ ಭಾರತ ಮಾಡಲು ಮೋದಿ ಹೋಗಿದರು ಅದಕ್ಕೆ ಕುಮಾರಸ್ವಾಮಿ ಕಾರಣವಲ್ಲ ಎಂದರು.

ಇನ್ನು ಈ ಬಾರಿ ನನ್ನ ಜಾತ್ಯಾತೀತತೆಯನ್ನ ಪರೀಕ್ಷೆ ಮಾಡಲಿ. ತಮಿಳುನಾಡಲ್ಲಿ ಏನಾಯ್ತು, ಯಾರು ಮನೆ ಬಾಗಿಲಿಗೆ ಹೋಗಿದರು ಬಿಹಾರದಲ್ಲಿ ಏನಾಯ್ತು. ಶಿವಸೇನೆ ಜೊತೆ ಸರ್ಕಾರ ಮಾಡಿಕೊಂಡಿಲ್ವಾ(?) ಗೋದ್ರಾ ಹತ್ಯಾಕಾಂಡ ವಿಚಾರ ಏನಾಯ್ತು. ಮುಸ್ಲಿಂರನ್ನ ಉಳಿಸೋ ಶಕ್ತಿ ಇವರಿಗೆ ಇಲ್ಲ. ಮುಸ್ಲಿಂರನ್ನ ದಾರಿ ತಪ್ಪಿಸಿದ್ದು ಯಾರು(?) ಎಂದು ಹೆಚ್ಡಿಡಿ ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ತಿರುಗೇಟು ನೀಡಿದರು.

ನಮ್ಮ ಪಕ್ಷದ ಬಗ್ಗೆ ಹಲವಾರು ರೀತಿ ವ್ಯಾಖ್ಯಾನ ನಡೆಯುತ್ತಿದೆ. ಆದರೆ, ವೈಯಕ್ತಿಕವಾಗಿ ಯಾರ ಬಗ್ಗೆಯೂ ಮಾತಾಡೋದಿಲ್ಲ. ನಮ್ಮದು ಪ್ರಾದೇಶಿಕ ಪಕ್ಷ. ಪಕ್ಷ ಬೆಳೆಸುವ ಕಷ್ಟ ನಮ್ಮ ಕಾರ್ಯಕರ್ತರಿಗೆ ಗೊತ್ತಿದೆ. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಮಾತುಗಳು ಬರುತ್ತಿವೆ. ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಅಂತ ಮಾತಾಡ್ತಾರೆ. ಇದಕ್ಕೆ ಕಾರಣ ಕುಮಾರಸ್ವಾಮಿನಾ, ರೇವಣ್ಣನಾ(?) ಎಂದು ಪ್ರಶ್ನೆ ಮಾಡಿದರು.

ಅದುವಲ್ಲದೇ ಈ ಹಿಂದೆ ನನ್ನನ್ನ ಎಲ್ಲರು ಹೊರ ಹಾಕಿದರು. ಏಕಾಂಗಿಯಾಗಿದ್ದೆ, ಯಾರ ಹೆಸರನ್ನೂ ಹೇಳೋಕ್ಕಾಗಲ್ಲ. ಮತ್ತೆ ವಾಪಾಸ್ ಎಲ್ಲಾ ನನ್ನತ್ರಾನೇ ಬಂದರು ಯಾರಾದ್ರೂ ನಂಗೆ ಹತ್ತು ರೂಪಾಯಿ ಕೊಟ್ಟಿದ್ರಾ(?) ಈಗ ಕೆಲವರು ಬದುಕಿದ್ದಾರೆ ಅವರಿಗೆ ಹೇಳುತ್ತಿದ್ದೇನೆ. ಒಬ್ಬ ಕನ್ನಡಿಗ ಪ್ರಧಾನಿ ಆಗೋ ಮಟ್ಟವೂ ಬಂತು. ನಾನು ಪ್ರಧಾನಿ ಆಕಾಂಕ್ಷಿ ಆಗಿರಲಿಲ್ಲ. ಅಪೇಕ್ಷೆಯೂ ಇರಲಿಲ್ಲ, ಅದು ವಿಧಿ. ನಂತರ ನನ್ನ ಬಿಟ್ಟು ಸರ್ಕಾರ ಕೂಡ ಮಾಡಿದರು ಎಂದಿದ್ದಾರೆ.

TRENDING