Monday, January 18, 2021
Home ಸುದ್ದಿ ಜಾಲ ನೀರಲ್ಲಿ ಮುಳುಗಿ ಮಲಯಾಳಂ ನ ಖ್ಯಾತ ನಟ ಅನಿಲ್ ನೆಡುಮಂಗಾಡ್ ನಿಧನ

ಇದೀಗ ಬಂದ ಸುದ್ದಿ

ನೀರಲ್ಲಿ ಮುಳುಗಿ ಮಲಯಾಳಂ ನ ಖ್ಯಾತ ನಟ ಅನಿಲ್ ನೆಡುಮಂಗಾಡ್ ನಿಧನ

 ಕೊಚ್ಚಿನ್: ಮಲಯಾಳಂ ಚಿತ್ರರಂಗದ ಖ್ಯಾತ ಪೋಷಕ ನಟ ಅನಿಲ್ ನೆಡುಮಂಗಾಡ್ (48) ತೊಡುಪುಳ ಮಾಲಂಕಾರ ಡ್ಯಾಮ್ ನಲ್ಲಿ ಗೆಳೆಯರ ಜೊತೆ ಸ್ನಾನ ಮಾಡಲು ಇಳಿದಾಗ, ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಶುಕ್ರವಾರ ಸಂಜೆ ನಟ ಮತ್ತು ಇತರ ಇಬ್ಬರು ಸ್ನಾನಕ್ಕಾಗಿ ಡ್ಯಾಮ್ ಗೆ ಹೋದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿತ್ರದ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಅವರು ತೊಡುಪುಳದಲ್ಲಿದ್ದರೆಂದು ತಿಳಿದು ಬಂದಿದೆ.

ನಟ ಮತ್ತು ಅವರ ಸ್ನೇಹಿತರು ಶೂಟಿಂಗ್ ವಿರಾಮದ ಸಮಯದಲ್ಲಿ ಸ್ನಾನ ಮಾಡಲು ಡ್ಯಾಮ್ ಗೆ ಹೋಗಿದ್ದಾಗ ನೀರಿನ ಸೆಳೆತಕ್ಕೆ ಅವರು ಮುಳುಗಿದ್ದಾರೆ, ತಕ್ಷಣ ಅನಿಲ್ ಅವರನ್ನು ನೀರಿನಿಂದ ರಕ್ಷಿಸಿ ಹತ್ತಿರದ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿಲ್ಲ. ಪೊಲೀಸರು ನಟನ ಶವವನ್ನು ತೋಡುಪುಳ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಅನಿಲ್ ‘ಕಮ್ಮಟ್ಟಿ ಪಾಡಮ್’, ‘ಎನ್ಜನ್ ಸ್ಟೀವ್ ಲೋಪೆಜ್’ ಮತ್ತು ‘ಪೊರಿಂಜು ಮರಿಯಮ್ ಜೋಸ್’ ‘ಅಯ್ಯಪ್ಪನುಂಕೊಶಿಯಮ್’ ಚಿತ್ರದಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದರು.

TRENDING