Tuesday, January 26, 2021
Home ರಾಜ್ಯ ‘ಕೆ.ಎಸ್.ಆರ್.ಟಿ.ಸಿ.’ ಪ್ರಯಾಣಿಕರ ಗಮನಕ್ಕೆ : ನಿಗಮದ 'ಸಹಾಯವಾಣಿ ಸಂಖ್ಯೆ' ಬದಲಾವಣೆ

ಇದೀಗ ಬಂದ ಸುದ್ದಿ

‘ಕೆ.ಎಸ್.ಆರ್.ಟಿ.ಸಿ.’ ಪ್ರಯಾಣಿಕರ ಗಮನಕ್ಕೆ : ನಿಗಮದ ‘ಸಹಾಯವಾಣಿ ಸಂಖ್ಯೆ’ ಬದಲಾವಣೆ

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪ್ರಯಾಣಿಕರ ಅನುಕೂಲಕ್ಕಾಗಿ ಸಹಾಯವಾಣಿ ಹಲವು ದಿನಗಳಿಂದ ಕಾರ್ಯನಿರ್ವಹಿಸುತ್ತಿತ್ತು. ಆದ್ರೇ, ಇದೀಗ ಹಳೆಯ ಸಹಾಯವಾಣಿ ಸಂಖ್ಯೆ ಬದಲಾವಣೆಗೊಂಡಿದ್ದು, ಹೊಸ ಸಹಾಯವಾಣಿ ಸಂಖ್ಯೆಗೆ ಬದಲಾವಣೆಗೊಂಡಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು, ಪ್ರಯಾಣಿಕರ ಪ್ರಯಾಣ ಸುಗಮಗೊಳಿಸಲು ಸಹಾಯವಾಣಿ ವ್ಯವಸ್ಥೆಯನ್ನು ಒದಗಿಸಲಾಗಿರುತ್ತದೆ. ನಿಗಮವು ಪ್ರಯಾಣಿಕರಿಗಾಗಿ ಒದಗಿಸಿರುವ ಕಾಲ್ ಸೆಂಟರ್ ಸಹಾಯವಾಣಿ ಸಂಖ್ಯೆ 9449596666 ಬದಲಾಯಿಸಲಾಗಿದೆ. ನೂತನ ಸಹಾಯವಾಣಿ ಸಂಖ್ಯೆ 080-26252625 ಅನ್ನು ದಿನಾಂಕ 01-01-2021ರಿಂದ ಜಾರಿಗೊಳಿಸಲಾಗುತ್ತಿದೆ ಎಂಬುದಾಗಿ ತಿಳಿಸಿದೆ.

ಹೀಗಾಗಿ ಪ್ರಯಾಣಿಕರಿಗೆ ಸಲಹೆ, ದೂರುಗಳು ಹಾಗೂ ಇನ್ನಿತರ ಮಾಹಿತಿಗಾಗಿ ಸಂಸ್ಥೆಯ ವಿಚಾರಣೆ, ಮಾಹಿತಿಗಾಗಿ ನೂತನ ಸಹಾಯವಾಣಿ ಸಂಖ್ಯೆ 080-26252625 ಸಂಖ್ಯೆಗೆ ಸಂಪರ್ಕಿಸುವಂತೆ ಕೋರಿದೆ.

TRENDING