Monday, January 25, 2021
Home ಜಿಲ್ಲೆ IT ರಿಟರ್ನ್ಸ್ : ಆದಾಯ ತೆರಿಗೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಇದೀಗ ಬಂದ ಸುದ್ದಿ

IT ರಿಟರ್ನ್ಸ್ : ಆದಾಯ ತೆರಿಗೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ

ನವದೆಹಲಿ: 2019-20ನೇ ಸಾಲಿನ ಎಲ್ಲ ಆದಾಯ ತೆರಿಗೆ ವಿವರ ಸಲ್ಲಿಕೆಗೆ ನೀಡಿದ್ದ ಗಡುವು ಡಿಸೆಂಬರ್ 31ಕ್ಕೆ ವಿಸ್ತರಣೆ ಯಾಗಿದ್ದು, ಆದಾಯ ತೆರಿಗೆ ಸಲ್ಲಿಸಲು ಇನ್ನು 6 ದಿನಗಳು ಮಾತ್ರ ಬಾಕಿ ಇದೆ.

ತೆರಿಗೆ ಪಾವತಿದಾರರು 2019-20ನೇ ಸಾಲಿನ (ಎವೈ 2020-21) ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸಲಿದ್ದಾರೆ. ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ ಸೈಟ್ https://www.incometaxindiaefiling.gov.in ಗೆ ಹೋಗುವ ಮೂಲಕ ನೀವು ಸುಲಭವಾಗಿ ನಿಮ್ಮ ಐಟಿಆರ್ ರಿಟರ್ನ್ ಫೈಲ್ ಮಾಡಬಹುದು.

ನೀವು ಇಫೈಲಿಂಗ್ ವೆಬ್ ಸೈಟ್ ಗೆ ಹೋಗುವ ಮುನ್ನ, ನೀವು 5 ದಾಖಲೆಗಳನ್ನು ಇಟ್ಟುಕೊಳ್ಳುವುದು ಉತ್ತಮ

1. ಪ್ಯಾನ್ ಕಾರ್ಡ್

2. ಆಧಾರ್ ಕಾರ್ಡ್ ಸಂಖ್ಯೆ

3. ವೇತನ/ಪಿಂಚಣಿ: ಉದ್ಯೋಗದಾತ(ಗಳು) ರಿಂದ ನಮೂನೆ 16

4. ಉಳಿತಾಯ ಖಾತೆ ಮತ್ತು ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿಗೆ ಬ್ಯಾಂಕ್ ಸ್ಟೇಟ್ ಮೆಂಟ್/ಪಾಸ್ ಬುಕ್

5. ನಿಮ್ಮ ಫಾರ್ಮ್ 26ಎಎಸ್ ನಲ್ಲಿ ಲಭ್ಯವಿರುವ ತೆರಿಗೆ ಪಾವತಿ ವಿವರಗಳನ್ನು ಪರಿಶೀಲಿಸಿ.

TRENDING