Wednesday, January 27, 2021
Home ರಾಜಕೀಯ ಜೆಡಿಎಸ್ ಬಿಟ್ಟು ಹೋಗೋರು ಮಾತೃ ಪಕ್ಷಕ್ಕೆ ಹಾನಿ ಮಾಡದೇ ಆದಷ್ಟು ಬೇಗ ತಮ್ಮ ದಾರಿ...

ಇದೀಗ ಬಂದ ಸುದ್ದಿ

ಜೆಡಿಎಸ್ ಬಿಟ್ಟು ಹೋಗೋರು ಮಾತೃ ಪಕ್ಷಕ್ಕೆ ಹಾನಿ ಮಾಡದೇ ಆದಷ್ಟು ಬೇಗ ತಮ್ಮ ದಾರಿ ನೋಡಿಕೊಳ್ಳಿ – ಹೆಚ್ ಡಿಕೆ

ಬೆಂಗಳೂರು : ಜೆಡಿಎಸ್ ಪಕ್ಷ ಯಾವುದೇ ಪಕ್ಷದಲ್ಲಿ ವಿಲೀನ್ ಅಥವಾ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳೋದಿಲ್ಲ. ಇಂತಹ ಯಾವುದೇ ಪ್ರಶ್ನೆಯೂ ಇಲ್ಲ. ಜೆಡಿಎಸ್ ಸ್ವತಂತ್ರ ಪ್ರಾದೇಶಿಕ ಪಕ್ಷವಾಗಿಯೇ ಮುಂದುವರೆಯಲಿದೆ. ಜೆಡಿಎಸ್ ಬಿಟ್ಟು ಹೋಗುವವರು ಮಾತೃ ಪಕ್ಷಕ್ಕೆ ಹಾನಿ ಮಾಡದೇ ಆದಷ್ಟು ಬೇಗ ತಮ್ಮ ದಾರಿ ನೋಡಿಕೊಳ್ಳಬಹುದಾಗಿ ಎಂಬುದಾಗಿ ಮಾಜಿ ಸಿಎಂ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅವರು, ಜೆಡಿಎಸ್ ಬಿಟ್ಟು ಶಾಸಕರು ಹೋಗ್ತಾ ಇರೋದು ಇದೇ ಹೊಸದಲ್ಲ. ಈ ಹಿಂದೆಯೂ ಆಗಿದೆ. ಈಗಲೂ ಆಗ್ತಾ ಇದೆ. ಇದರಿಂದ ವಿಚಲಿತರಾಗೋದಿಲ್ಲ. ಪಕ್ಷ ಬಲವರ್ಧನೆಗೆ ಕಾರ್ಯಕ್ರಮ ರೂಪಿಸಿಲಿದ್ದೇನೆ. ಜನವರಿ 15ರಿಂದ ಪಕ್ಷ ಬಲವರ್ಧನೆಯ ಕಾರ್ಯ ಆರಂಭವಾಗಲಿದೆ ಎಂಬುದಾಗಿ ಹೇಳಿದ್ದಾರೆ.

ಇನ್ನೂ ಮುಂದುವರೆದು ಮಾತನಾಡಿದ ಅವರು, ಕಾಂಗ್ರೆಸ್ ನ ಕೆಲವರು ಜೆಡಿಎಸ್ ಎಂದ್ರೇ ಬಿಜೆಪಿಯ ಬಿ ಟೀಂ ಎನ್ನುತ್ತಿದ್ದಾರೆ. ಅಲ್ಲದೇ ನಮ್ಮದೇ ಕೆಲ ಶಾಸಕರು ಪಕ್ಷ ಬಿಡುವವರಿದ್ದಾರೆ. ಅಂಥವರೂ ಅಪಪ್ರಚಾರ ಮಾಡುತ್ತಿದ್ದಾರೆ. ಪ್ರಾದೇಶಿಕ ಪಕ್ಷವಾಗಿ ರಾಜ್ಯದ ಸಮಸ್ಯೆ ನಿರ್ವಹಣೆ ಮಾಡುವದರಲ್ಲಿ ರಾಜೀ ಆಗುವುದೇ ಇಲ್ಲ. ಜನರ ಧ್ವನಿಯಾಗಿ ನಾವಿರುತ್ತೇವೆ. ಜೆಡಿಎಸ್ ಬಿಟ್ಟು ಹೋಗುವವರು ಮಾತೃ ಪಕ್ಷಕ್ಕೆ ಹಾನಿ ಮಾಡದೇ ಆದಷ್ಟು ಬೇಗ ತಮ್ಮ ದಾರಿ ನೋಡಿಕೊಳ್ಳಬಹುದು ಎಂಬುದಾಗಿ ತಿಳಿಸಿದ್ದಾರೆ.

TRENDING