ವಿಜಯಪುರ : ತನ್ನ ತಾಯಿಗೆ ಬೈದಿರುವುದನ್ನು ಮಗು ಪ್ರಶ್ನಿಸಿಸಕ್ಕೆ ಆತನನ್ನು ಮಟನ್ ಕತ್ತರಿಸುವ ಹರಿತವಾದ ಚಾಕುವಿನಿಂದ ಚುಚ್ಚಿ ಹತ್ಯೆಗೈದಿರುವ ಘಟನೆ ಗುಮ್ಮಟನಗರಿ ವಿಜಯಪುರ ತಾಲೂಕಿನಲ್ಲಿ ಖತಿಜಾಪುರ ಗ್ರಾಮದಲ್ಲಿ ನಡೆದಿದೆ. ಖತಿಜಾಪುರ ನಿವಾಸಿ ಇಸ್ಮಾಯಿಲ್ ಮುಲ್ಲಾ (22) ಕೊಲೆಯಾದ ಯುವಕ. ಇನ್ನು
ಖಾಜಲ್ ಬೇಪಾರಿ ಕೊಲೆ ಮಾಡಿದ ವ್ಯಕ್ತಿ.
ಇನ್ನು ಕೊಲೆಗೀಡಾದ ಇಸ್ಮಾಯಿಲ್ ತಾಯಿಗೆ ಖಾಜಲ್ ಅವಾಚ್ಯ ಶಬ್ದಗಳಿಂದ ಬೈಯ್ದಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಕೊಲೆಗೈದು ಪರಾರಿಯಾಗಿದ್ದಾನೆ. ಅಲ್ಲದೇ, ಹತ್ಯೆಗೈದಿರುವ ಇಸ್ಮಾಯಿಲ್ ದೇಹದಲ್ಲಿಯೇ ಚಾಕೂ ಉಳಿದ್ದಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಕೊಲೆಗಾರ ಖಾಜಲ್ ಗೂ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಅಡ್ಮಿಟ್ ಮಾಡಲಾಗಿದೆ. ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ಪಿಎಸೈ ಆನಂದ ಠಕ್ಕಣವರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತುವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ