Sunday, January 24, 2021
Home ಕೋವಿಡ್-19 ಬ್ರಿಟನ್ ನಿಂದ ಕೇರಳಕ್ಕೆ ಬಂದ 8 ಮಂದಿಗೆ ಕೊರೊನಾ ಪಾಸಿಟಿವ್.!

ಇದೀಗ ಬಂದ ಸುದ್ದಿ

ಬ್ರಿಟನ್ ನಿಂದ ಕೇರಳಕ್ಕೆ ಬಂದ 8 ಮಂದಿಗೆ ಕೊರೊನಾ ಪಾಸಿಟಿವ್.!

ಕೆಲ ದಿನಗಳ ಹಿಂದಷ್ಟೇ ಬ್ರಿಟನ್​ನಿಂದ ಕೇರಳಕ್ಕೆ ಮರಳಿದ 8 ಮಂದಿಯ ಕೊರೊನಾ ವರದಿ ಪಾಸಿಟಿವ್​ ಬಂದಿದೆ.

ಹೆಚ್ಚಿನ ಸಂಶೋಧನೆಗಾಗಿ ಅವರ ಸ್ವ್ಯಾಬ್​ ಮಾದರಿಗಳನ್ನ ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಬ್ರಿಟನ್​ನಿಂದ ರಾಜ್ಯಕ್ಕೆ ಹಿಂದುರಿಗಿದ್ದ 8 ಜನರ ಮಾದರಿಗಳು ಸಕಾರಾತ್ಮಕವಾಗಿ ಬಂದಿದೆ. ಹೆಚ್ಚಿನ ಪರೀಕ್ಷೆಗಾಗಿ ಎನ್​ಐವಿಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಸಚಿವೆ ಕೆ. ಕೆ. ಶೈಲಜಾ ಹೇಳಿದರು.

ಈ ಘಟನೆ ಬಳಿಕ ಕೇರಳದ ನಾಲ್ಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಭದ್ರತೆಯನ್ನ ಇನ್ನಷ್ಟು ಬಲಪಡಿಸಲಾಗಿದೆ.

ಬ್ರಿಟನ್​ನಲ್ಲಿ ರೂಪಾಂತರಿ ಕೊರೊನಾ ವೈರಸ್ ಕಂಡು ಬಂದ ಹಿನ್ನೆಲೆ ಮುನ್ನಚ್ಚರಿಕಾ ಕ್ರಮವಾಗಿ ಭಾರತದಿಂದ ಬ್ರಿಟನ್​ಗೆ ಎಲ್ಲಾ ಅಂತಾರಾಷ್ಟ್ರೀಯ ವಿಮಾನಯಾವನ್ನ ರದ್ದುಗೊಳಿಸಲಾಗಿದೆ .

TRENDING