Tuesday, January 26, 2021
Home ಅಂತರ್ ರಾಷ್ಟ್ರೀಯ ಬ್ರಿಟನ್ ಬಳಿಕ ಇದೀಗ ಜಪಾನ್ ಗೂ ಕಾಲಿಟ್ಟ ರೂಪಾಂತರಿ ಕೊರೋನಾ ವೈರಸ್

ಇದೀಗ ಬಂದ ಸುದ್ದಿ

ಬ್ರಿಟನ್ ಬಳಿಕ ಇದೀಗ ಜಪಾನ್ ಗೂ ಕಾಲಿಟ್ಟ ರೂಪಾಂತರಿ ಕೊರೋನಾ ವೈರಸ್

ಟೋಕಿಯೋ: ಬ್ರಿಟನ್ ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡು ವಿಶ್ವಾದ್ಯಂತ ಭೀತಿ ಸೃಷ್ಟಿಸಿರುವ ರೂಪಾಂತರಿತ ಕೊರೋನಾ ವೈರಸ್ ಇದೀಗ ಜಪಾನ್ ಗೂ ಕಾಲಿಟ್ಟಿದೆ.

ಜಪಾನ್ ಸರ್ಕಾರ ಶುಕ್ರವಾರ ಇಂತಹ ಮೊದಲ ಪ್ರಕರಣವನ್ನು ವರದಿ ಮಾಡಿದ್ದು, ಡಿಸೆಂಬರ್ 18ರಿಂದ 21ರವರೆಗೆ ಬ್ರಿಟನ್ ನಿಂದ ಜಪಾನ್ ಗೆ ಬಂದ ಐದು ಮಂದಿಯಲ್ಲಿ ಇದೀಗ ಸೋಂಕು ಕಾಣಿಸಿಕೊಂಡಿದೆ.

ಜಪಾನ್ ಸರ್ಕಾರ ವಿಮಾನ ನಿಲ್ದಾಣದಲ್ಲಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಮುನ್ನಲೇ ಅವರು ಆಗಮಿಸಿದ್ದರಿಂದ ಹೊಸ ವಿಧಾನದ ಸೋಂಕು ಪತ್ತೆಯಾಗಿರಲಿಲ್ಲ. ಇದೀಗ ಆ ಐದು ಮಂದಿಯ ಪೈಕಿ ಓರ್ವರಲ್ಲಿ ಆಯಾಸ, ಜ್ವರ ಮತ್ತು ಶೀಥದ ಲಕ್ಷಣ ಕಾಣಿಸಿಕೊಂಡಿದ್ದು, ಅವರನ್ನು ಪರೀಕ್ಷಿಸಿದಾಗ ಅವರಲ್ಲಿ ಕೊರೋನಾ ರೂಪಾಂತರಿತ ವೈರಸ್ ಸೋಂಕು ಇರುವುದು ಪತ್ತೆಯಾಗಿದೆ. ಇತರರು ರೋಗ ರಹಿತರಾಗಿದ್ದಾರೆ.

ಜಪಾನ್ ಆರೋಗ್ಯ ಸಚಿವ ನೊರಿಹಿಸಾ ತಮುರಾ ಮಾಹಿತಿ ನೀಡಿದ್ದು , ಎಲ್ಲ ಐದೂ ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು, ಅವರ ಸಂಪರ್ಕದ ಮಾಹಿತಿ ಪಡೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ.

TRENDING