Saturday, January 23, 2021
Home ರಾಜಕೀಯ ಮತ್ತೆ ಸಿಎಂ ಆಗುವ ಕನಸು ಬಿಚ್ಚಿಟ್ಟ ಶಾಸಕ ಯತ್ನಾಳ್!

ಇದೀಗ ಬಂದ ಸುದ್ದಿ

ಮತ್ತೆ ಸಿಎಂ ಆಗುವ ಕನಸು ಬಿಚ್ಚಿಟ್ಟ ಶಾಸಕ ಯತ್ನಾಳ್!

ವಿಜಯಪುರ : ಸಚಿವ ಸಂಪುಟ ವಿಸ್ತರಣೆಯಾಗುತ್ತೆ ಎಂಬುದನ್ನು ನಾನು ಹೇಳುವುದಿಲ್ಲ, ನಾನು ಅದರಲ್ಲಿ ಇಲ್ಲಾ. ದಯವಿಟ್ಟು ಯತ್ನಾಳರ ಹೆಸರು ಇದೆ ಎಂದು ಸುದ್ದಿ ಹೊಡೆಯಬೇಡಿ. ನಾನು ಮಂತ್ರಿಯಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ನನಗೆ ಮಂತ್ರಿಯಾಗಲು ಮನಸ್ಸಿಲ್ಲ. ಮುಂದೆ ಹಣೆಬರಹ ಯಾರದ್ದೂ ಯಾರಿಗೂ ಗೊತ್ತಿಲ್ಲ, ಹಣೆಬರಹದಲ್ಲಿ ಇದ್ದರೆ ಸಿಎಂ ಆಗಬಹುದು, ಆಗಬಾರದು ಅಂತೆಲ್ಲಿದೆ? ಎಂಬುದಾಗಿ ಹೇಳುವ ಮೂಲಕ, ಮತ್ತೆ ಸಿಎಂ ಆಗುವ ಕನಸನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಚ್ಚಿಟ್ಟಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಆಗುತ್ತೋ, ಪುನರ್ ರಚನೆಯಾಗುತ್ತೋ ಖಚಿತ ಮಾಹಿತಿ ಇಲ್ಲಾ. ನೀವು ಮಾಧ್ಯಮದವರೇ ಅದನ್ನ ಎಬ್ಬಿಸಿದ್ದೀರಿ, ನೀವು ಯಾವಾಗ್ಯಾವಾಗ ಯಾರ ಪರವಾಗಿ ಹೊಡಿತಿರೋ ಗೊತ್ತಿಲ್ಲ. ಎಲ್ಲವೂ ಗೋಡಾರ್ಥವಿದೆ, ಇದೆಲ್ಲದಕ್ಕೂ ಮಕರ ಸಂಕ್ರಮಣದಲ್ಲಿ ಐತಿಹಾಸಿಕವಾಗಿ ಬದಲಾವಣೆಗಳು ಆಗಲಿವೆ ಎಂಬುದಾಗಿ ಹೇಳಿದರು.

ಇನ್ನೂ ಮುಂದುವರೆದು ಮಾತನಾಡಿದ ಅವರು, ಸಂಕ್ರಮಣದ ಬಳಿಕ ಉತ್ತರಾಯಣ ಕಾಲ ಆರಂಭವಾಗಲಿದೆ. ಸೂರ್ಯ ಉತ್ತರ ಪಥದಿಂದ ಬರುತ್ತಾನೆ, ಈ ವೇಳೆ ಉತ್ತರ ಕರ್ನಾಟಕಕ್ಕೆ ಉತ್ತರಾಯಣ ಆಗಲಿದೆ. ಸಚಿವ ಸಂಪುಟ ವಿಸ್ತರಣೆಯಾಗುತ್ತೆ ಎಂಬುದನ್ನು ನಾನು ಹೇಳುವುದಿಲ್ಲ, ನಾನು ಅದರಲ್ಲಿ ಇಲ್ಲಾ. ದಯವಿಟ್ಟು ಯತ್ನಾಳರ ಹೆಸರು ಇದೆ ಎಂದು ಸುದ್ದಿ ಹೊಡೆಯಬೇಡಿ. ನಾನು ಮಂತ್ರಿಯಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ನನಗೆ ಮಂತ್ರಿಯಾಗಲು ಮನಸ್ಸಿಲ್ಲ. ಮುಂದೆ ಹಣೆಬರಹ ಯಾರದ್ದೂ ಯಾರಿಗೂ ಗೊತ್ತಿಲ್ಲ, ಹಣೆಬರಹದಲ್ಲಿ ಇದ್ದರೆ ಸಿಎಂ ಆಗಬಹುದು, ಆಗಬಾರದು ಅಂತೆಲ್ಲಿದೆ? ಎಂಬುದಾಗಿ ಹೇಳುವ ಮೂಲಕ, ಮತ್ತೊಮ್ಮೆ ತಮ್ಮ ಸಿಎಂ ಆಗುವ ಆಸೆಯನ್ನು ಬಿಚ್ಚಿಟ್ಟರು.

ಕೇಂದ್ರ ಹೈಕಮಾಂಡ್ 100ಕ್ಕೆ 100ರಷ್ಟು ಒಳ್ಳೆಯ ನಿರ್ಣಯ ತೆಗೆದುಕೊಳ್ಳುತ್ತೆ ಎಂಬ ವಿಶ್ವಾಸವಿದೆ. ವಿಜಯಪುರ ಜಿಲ್ಲೆಗೆ ಇಷ್ಟುದಿನ ಆದ ಅನ್ಯಾಯಕ್ಕೆ ನ್ಯಾಯ ಕೊಡುವ ಕೆಲಸ ಕೇಂದ್ರ ಮಾಡಲಿದೆ. ರಿಮೋಟ್ ನಿಮ್ಮ ಬಳಿಯೇ(ಮಾಧ್ಯಮಗಳ) ಇವೆ, ಯಾವಾಗ ಯಾರನ್ನ ಹೊಗಳ್ತಿರೋ ಯಾವಾಗ ಯಾರನ್ನ ಮಣ್ಣಲ್ಲಿ ಇಡ್ತಿರೋ ಗೊತ್ತಿಲ್ಲ ಎಂದರು.

TRENDING