ಚಿಕ್ಕೋಡಿ: ತಾಲೂಕಿನ ಕರಗಾಂವ ಗ್ರಾಮದ ಸಿಆರ್ ಪಿಎಫ್ ಯೋಧ ಅನಾರೋಗ್ಯದಿಂದ ಕರ್ತವ್ಯದಲ್ಲಿ ಇದ್ದಾಗಲೇ ಹೈದರಾಬಾದ್ ನಲ್ಲಿ ಮೃತಪಟ್ಟಿದ್ದಾರೆ.
ಮುತ್ತಪ್ಪ ಈರಪ್ಪ ಅಮ್ಮಿನಭಾವಿ (38) ಮೃತಪಟ್ಟ ಸಿಆರ್ ಪಿಎಫ್ ಯೋಧ. ದೀಪಾವಳಿ ಹಬ್ಬಕ್ಕೆಂದು ರಜೆ ಪಡೆದು ಊರಿಗೆ ಬಂದು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದರು. ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮೃತರು ಪತ್ನಿ, ಪುತ್ರ, ತಂದೆ-ತಾಯಿ ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.
ಯೋಧನ ಪಾರ್ಥಿವ ಶರೀರ ಶುಕ್ರವಾರ ಮಧ್ಯಾಹ್ನದ ಬಳಿಕ ಸ್ವಗ್ರಾಮಕ್ಕೆ ಆಗಮಿಸುವ ನಿರೀಕ್ಷೆ ಇದೆ. ಗ್ರಾಮದಲ್ಲಿ ಮೆರವಣಿಗೆ ನಡೆಸಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.