Saturday, January 23, 2021
Home ದೆಹಲಿ ರೂಪಾಂತರಿ ಕೊರೊನಾ ಕುರಿತು ಸಂಶೋಧನೆಯಲ್ಲಿ ಭಯಾನಕ ಮಾಹಿತಿ ಬಹಿರಂಗ!

ಇದೀಗ ಬಂದ ಸುದ್ದಿ

ರೂಪಾಂತರಿ ಕೊರೊನಾ ಕುರಿತು ಸಂಶೋಧನೆಯಲ್ಲಿ ಭಯಾನಕ ಮಾಹಿತಿ ಬಹಿರಂಗ!

 ನವದೆಹಲಿ: ಯುನೈಟೆಡ್​​ ಕಿಂಗ್​ಡಮ್​ನಲ್ಲಿ ಗೋಚರವಾಗಿರುವ ಹೊಸ ರೂಪಾಂತರ ಕೊರೊನಾ ವೈರಸ್​ ತೀವ್ರ ಸಾಂಕ್ರಾಮಿಕವಾಗಿರುವಂತೆ ಕಾಣುತ್ತಿದ್ದು, ಇದರಿಂದ ಮುಂದಿನ ವರ್ಷದಲ್ಲಿ ಹೆಚ್ಚಿನ ಜನರು ಆಸ್ಪತ್ರೆ ಸೇರುವಂತೆ ಮತ್ತು ಸಾವುಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಹೊಸ ಸಂಶೋಧನೆಯೊಂದು ಹೇಳಿದೆ.

ಹೊಸ ಸಂಶೋಧನೆಯ ಪ್ರಕಾರ ಇತರೆ ಸಂತತಿಗಿಂತ ರೂಪಾಂತರಿ ಕೊರೊನಾ ಶೇ. 56 ರಷ್ಟು ವೇಗವಾಗಿ ಹರಡುತ್ತದೆ ಎಂದು ಲಂಡನ್ ಸ್ಕೂಲ್ ಆಫ್ ಹೈಜೀನ್ ಮತ್ತು ಟ್ರಾಪಿಕಲ್ ಮೆಡಿಸಿನ್‌ನಲ್ಲಿನ ಸಾಂಕ್ರಾಮಿಕ ರೋಗಗಳ ಗಣಿತದ ಮಾದರಿ ಕೇಂದ್ರದ ಅಧ್ಯಯನ ತಿಳಿಸಿದೆ. ಆದರೆ, ರೂಪಾಂತರಿ ಕೊರೊನಾ ಹೆಚ್ಚು ಅಥವಾ ಕಡಿಮೆ ತೀವ್ರವಾದ ಕಾಯಿಲೆಗೆ ಕಾರಣವಾಗುತ್ತದೆ ಎಂಬುದಕ್ಕೆ ಯಾವುದೇ ಸ್ಪಷ್ಟ ಪುರಾವೆಗಳು ಇಲ್ಲದಿರುವುದು ನೆಮ್ಮದಿಯ ನಿಟ್ಟುಸಿರುವ ಬಿಡುವ ವಿಚಾರವಾಗಿದೆ.

ರೂಪಾಂತರಿ ವೈರಸ್​ ಶೇ. 70 ರಷ್ಟು ವೇಗವಾಗಿ ಹರಡುತ್ತದೆ ಎಂದು ಈ ಮುನ್ನ ಬ್ರಿಟನ್​ ಸರ್ಕಾರ ಹೇಳಿತ್ತು. ಹೊಸ ವೈರಸ್​ ಸುಮಾರು ಎರಡು ಡಜನ್ ರೂಪಾಂತರಗಳನ್ನು ಹೊಂದಿದ್ದು, ಅದು ಕೊರೊನವೈರಸ್ ತಯಾರಿಸಿದಂತಹ ಪ್ರೋಟೀನ್‌ಗಳ ಮೇಲೆ ಪರಿಣಾಮ ಬೀರಬಹುದು ಎಂದು ಡಿಸೆಂಬರ್​ 19ರಂದು ಯುನೈಟೆಡ್​ ಕಿಂಗ್​​ಡಮ್​ನ ಮುಖ್ಯ ವೈಜ್ಞಾನಿಕ ಸಲಹೆಗಾರ ಪ್ಯಾಟ್ರಿಕ್​ ವಲ್ಲಾನ್ಸ್​ ಹೇಳಿದ್ದಾರೆ.

ಹೊಸ ರೂಂಪಾಂತರಿಯಿಂದಾಗಿ ಕೊರೊನಾ ಪರೀಕ್ಷೆ, ಚಿಕಿತ್ಸೆ ಮತ್ತು ಲಸಿಕೆ ಮೇಲೆ ಕಳವಳ ವ್ಯಕ್ತಪಡಿಸುವಂತಾಗಿದೆ. ಆದರೆ, ಹೊಸ ವೈರಸ್​ ಮೊದಲಗಿಂತ ಭಿನ್ನವಾಗಿರುವುದಿಲ್ಲ ಎಂದು ಯೂರೋಪ್​ನ ಆರೋಗ್ಯ ನಿಯಂತ್ರಕವು ಹೇಳಿದೆ. ಈಗಾಗಲೇ ರೂಪಾಂತರಿ ವೈರಸ್​ ಆಸ್ಟ್ರೇಲಿಯಾ, ಡೆನ್ಮಾರ್ಕ್​ ಮತ್ತು ಸಿಂಗಾಪೂರ್​ನಲ್ಲಿ ಪತ್ತೆಯಾಗಿದೆಯಂತೆ.

TRENDING