Tuesday, January 19, 2021
Home ಕೋವಿಡ್-19 ಬ್ರಿಟನ್ ನಿಂದ ಬೆಂಗಳೂರಿಗೆ ಆಗಮಿಸಿದ್ದ 7 ಮಂದಿಗೆ `ರೂಪಾಂತರಿ' ಕೊರೊನಾ ಸೋಂಕು ಪತ್ತೆ!

ಇದೀಗ ಬಂದ ಸುದ್ದಿ

ಬ್ರಿಟನ್ ನಿಂದ ಬೆಂಗಳೂರಿಗೆ ಆಗಮಿಸಿದ್ದ 7 ಮಂದಿಗೆ `ರೂಪಾಂತರಿ’ ಕೊರೊನಾ ಸೋಂಕು ಪತ್ತೆ!

 ಬೆಂಗಳೂರು : ವಿಶ್ವಾದ್ಯಂತ ಆತಂಕ ಹುಟ್ಟಿಸಿರುವ ರೂಪಾಂತರಿ ಕೊರೊನಾ ವೈರಸ್ ಇದೀಗ ಬೆಂಗಳೂರಿಗೆ ಎಂಟ್ರಿಕೊಟ್ಟಿದ್ದು, ಬ್ರಿಟನ್ ನಿಂದ ಬೆಂಗಳೂರಿಗೆ ಆಗಮಿಸಿದ್ದ ಏಳು ಜನರಲ್ಲಿ ರೂಪಾಂತರಿ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ ಎನ್ನಲಾಗಿದೆ..

ಡಿಸೆಂಬರ್ 19 ರಂದು ಭಾರತಕ್ಕೆ ಆಗಮಿಸಿದ್ದ ಬ್ರಿಟನ್ ವಿಮಾನದಲ್ಲಿ ಮೂವರಲ್ಲಿ ಸೋಂಕು ಪತ್ತೆಯಾಗಿತ್ತು, ಇದೀಗ ನಿನ್ನೆ ಮತ್ತೆ ನಾಲ್ವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಒಟ್ಟು ಏಳು ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

ಡಿಸೆಂಬರ್12 ರಿಂದ 21 ರವರೆಗೂ ಒಟ್ಟು 1,582 ಜನ ಬ್ರಿಟನ್​ನಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಪೈಕಿ ಏಳು ಜನರಲ್ಲಿ ಸೋಂಕು ಪತ್ತೆಯಾಗಿರುವ ಕಾರಣ ಬಿಬಿಎಂಪಿ ಅಧಿಕಾರಿಗಳು ಇದೀಗ 1,582 ಜನರಿಗೂ ಆರ್​ಟಿಪಿಸಿಆರ್ ಕೊರೋನಾ ಪರೀಕ್ಷೆ ಮಾಡಲು ಮುಂದಾಗಿದೆ ಎನ್ನಲಾಗುತ್ತಿದೆ.

TRENDING