Sunday, January 24, 2021
Home ಅಂತರ್ ರಾಜ್ಯ ‘BARCʼನ ಮಾಜಿ ಸಿಇಒ 'ಪಾರ್ಥೋ ದಾಸ್ ಗುಪ್ತಾ' ಅರೆಸ್ಟ್..!

ಇದೀಗ ಬಂದ ಸುದ್ದಿ

‘BARCʼನ ಮಾಜಿ ಸಿಇಒ ‘ಪಾರ್ಥೋ ದಾಸ್ ಗುಪ್ತಾ’ ಅರೆಸ್ಟ್..!

ಮುಂಬಯಿ: ನಕಲಿ ಟಿಆರ್ ಪಿ ಹಗರಣದಲ್ಲಿ ಪುಣೆ ಜಿಲ್ಲೆಯ ಪ್ರಸಾರ ಪ್ರೇಕ್ಷಕ ಸಂಶೋಧನಾ ಮಂಡಳಿಯ (BARC) ಮಾಜಿ ಸಿಇಒ ಪಾರ್ಥೋ ದಾಸ್ ಗುಪ್ತಾ ಅವರನ್ನ ಮುಂಬೈ ಪೊಲೀಸ್ ಅಪರಾಧ ವಿಭಾಗ ಗುರುವಾರ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೆಲವು ಟಿವಿ ಚಾನೆಲ್ʼಗಳು ಟಿವಿ ರೇಟಿಂಗ್ ಪಾಯಿಂಟ್ (ಟಿಆರ್ ಪಿ) ಅವ್ಯವಹಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಹದಿನೈದನೇ ಆರೋಪಿ ಇವರಾಗಿದ್ದಾರೆ.

ಪುಣೆ ಜಿಲ್ಲೆಯ ರಾಜ್ ಗಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈತನನ್ನ ಕ್ರೈಂ ಇಂಟಲಿಜೆನ್ಸ್ ಯುನಿಟ್ (ಸಿಯು) ಬಂಧಿಸಿದ್ದು, ಶುಕ್ರವಾರ ಮುಂಬೈನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಪ್ರಕರಣದಲ್ಲಿ ಬಿಆರ್ ಸಿ ಯ ಮಾಜಿ ಮುಖ್ಯ ಕಾರ್ಯಾಚರಣಾ ಅಧಿಕಾರಿ (ಸಿಒಒ) ಅವರನ್ನು ಸಿಐಯು ಬಂಧಿಸಿತ್ತು.

ರೇಟಿಂಗ್ ಏಜೆನ್ಸಿಯಾದ BARC ಕೆಲವು ಚಾನೆಲ್ʼಗಳು ಟಿಆರ್ ಪಿಯನ್ನ ರಿಗ್ಗಿಂಗ್ ಮಾಡುತ್ತಿರುವ ಬಗ್ಗೆ ದೂರು ದಾಖಲಿಸಿದ ನಂತರ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ.

TRENDING