Wednesday, January 20, 2021
Home ಸುದ್ದಿ ಜಾಲ BCCI ವಾರ್ಷಿಕ ಸಭೆಗೆ ಮುನ್ನ ಉನ್ನತ ಅಧಿಕಾರಿ ʼಕೆ.ವಿ ರಾವ್ʼ ರಾಜೀನಾಮೆ

ಇದೀಗ ಬಂದ ಸುದ್ದಿ

BCCI ವಾರ್ಷಿಕ ಸಭೆಗೆ ಮುನ್ನ ಉನ್ನತ ಅಧಿಕಾರಿ ʼಕೆ.ವಿ ರಾವ್ʼ ರಾಜೀನಾಮೆ

ಬಿಸಿಸಿಐನ ವಾರ್ಷಿಕ ಸಾಮಾನ್ಯ ಸಭೆಗೆ ಮುನ್ನ ಬಿಸಿಸಿಐನ ಉನ್ನತ ಮಟ್ಟದ ಅಧಿಕಾರಿಯೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಯಾವ ಕಾರಣಕ್ಕೆ ಈ ರಾಜೀನಾಮೆಯನ್ನು ಸಲ್ಲಿಸಲಾಗಿದೆ ಎಂಬ ಬಗ್ಗೆ ಈವರೆಗೂ ಮಾಹಿತಿ ಲಭ್ಯವಾಗಿಲ್ಲ. ಮ್ಯಾನೇಜರ್ ಆಗಿದ್ದ ಕೆವಿಪಿ ರಾವ್ ರಾಜೀನಾಮೆ ನೀಡಿದ ಅಧಿಕಾರಿಯಾಗಿದ್ದಾರೆ.

ಅಹ್ಮದಾಬಾದ್‌ನಲ್ಲಿ ಸಭೆಯಲ್ಲಿ ಭಾಗಿಯಾಗಿದ್ದ ಕೆಲ ಸದಸ್ಯರು ಕೆವಿಪಿ ರಾಜೀನಾಮೆಯನ್ನು ಖಚಿತಪಡಿಸಿದ್ದಾರೆ. ಈ ರಾಜೀನಾಮೆ ತಕ್ಷಣದಿಂದಲೇ ಅನ್ವಯವಾಗುತ್ತಿದೆ ಎಂಬ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಕೆವಿಪಿ ರಾವ್ ದೇಶೀಯ ಕ್ರಿಕೆಟ್‌ನ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು.

“ನನಗೆ ಈ ರಾಜೀನಾಮೆಗೆ ಕಾರಣ ತಿಳಿದಿಲ್ಲ. ಆದರೆ ಅವರು ರಾಜೀನಾಮೆಯನ್ನು ನೀಡಿರುವುದು ಮಾತ್ರ ಖಚಿತ. ಆದರೆ ಅವರು ಇಂದೇ ರಾಜೀನಾಮೆಯನ್ನು ನೀಡಿದ್ದಾರೋ ಅಥವಾ ಈ ಹಿಂದೆಯೇ ಸಲ್ಲಿಸಿದ್ದರೋ ಎಂದು ನನಗೆ ತಿಳಿದಿಲ್ಲ” ಎಂದು ಬಿಸಿಸಿಐನ ಹಿರಿಯ ಸದಸ್ಯರೊಬ್ಬರು ಮುಂಬೈ ಮಿರರ್‌ಗೆ ಪ್ರತಿಕ್ರಿಯೆ ನೀಡಿರುವುದನ್ನು ಪತ್ರಿಕೆ ಉಲ್ಲೇಖಿಸಿದೆ.

55 ವರ್ಷದ ಕೆವಿಪಿ ರಾವ್ ಬಿಹಾರ ಕ್ರಿಕೆಟ್ ತಂಡದ ಮಾಜಿ ನಾಯಕನಾಗಿದ್ದರು. ಕಳೆದ 10 ವರ್ಷಗಳಿಂದ ಅವರು ಬಿಸಿಸಿಐನಲ್ಲಿ ನಾನಾ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ದೇಶೀಯ ಕ್ರಿಕೆಟ್‌ನ ಜೊತೆಗೆ ಬೆಂಗಳೂರಿನಲ್ಲಿರುವ ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಲ್ಲೂ ಕರ್ತವ್ಯ ನಿರ್ವಹಿಸಿದ್ದಾರೆ.

ಕೆವಿಪಿ ರಾವ್ ಅವರ ರಾಜೀನಾಮೆಯೊಂದಿಗೆ ದೇಶೀಯ ಕ್ರಿಕೆಟ್‌ನ ಉನ್ನತ ಹುದ್ದೆಯಲ್ಲಿದ್ದ ಎರಡನೇ ಅಧಿಕಾರಿ ರಾಜೀನಾಮೆ ನೀಡಿದಂತಾಗಿದೆ. ಇತ್ತೀಚೆಗಷ್ಟೇ ಜನರಲ್ ಮ್ಯಾನೇಜರ್ ಆಗಿದ್ದ ಕರೀಮ್ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದರು. ಸದ್ಯ ಹೆಚ್ಚಿನ ದೇಶೀಯ ಕ್ರಿಕೆಟ್ ನಡೆಯುತ್ತಿಲ್ಲ, ಬಿಸಿಸಿಐ ಇದನ್ನು ನಿರ್ವಹಿಸಲಿದೆ ಎಂದು ಅಧಿಕಾರಿಯೊಬ್ಬರು ಈ ರಾಜೀನಾಮೆಯ ಬಗ್ಗೆ ಪ್ರತಿಕ್ರಿಯಿಸುತ್ತಾ ಹೇಳಿದ್ದಾರೆ.

TRENDING