Sunday, January 24, 2021
Home ಬೆಂಗಳೂರು ಶಾಲೆಗಳ ಆರಂಭದ ಬಗ್ಗೆ ನಾನು ಹಠ ಹಿಡಿದಿಲ್ಲ: ಸುರೇಶ್ ಕುಮಾರ್

ಇದೀಗ ಬಂದ ಸುದ್ದಿ

ಶಾಲೆಗಳ ಆರಂಭದ ಬಗ್ಗೆ ನಾನು ಹಠ ಹಿಡಿದಿಲ್ಲ: ಸುರೇಶ್ ಕುಮಾರ್

 ಬೆಂಗಳೂರು : ಶಾಲೆಗಳ ಆರಂಭದ ವಿಚಾರದಲ್ಲಿ ಸರ್ಕಾರ ಪ್ರತಿಷ್ಠೆ ತೋರಿಸುತ್ತಿಲ್ಲ. ಶಾಲೆಗಳ ಆರಂಭದ ಬಗ್ಗೆ ನಾನು ಹಠ ಹಿಡಿದಿಲ್ಲ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಗಳು ಇಲ್ಲದೇ ಇರುವ ಕಾರಣದಿಂದ ಗ್ರಾಮೀಣ ಭಾಗಗಳಲ್ಲಿ ಬಾಲಕಾರ್ಮಿಕ ಪದ್ಧತಿ ಹೆಚ್ಚಿದೆ. ಬಾಲ್ಯ ವಿವಾಹವೂ ಹೆಚ್ಚಾಗುತ್ತಿದೆ ಆದ್ದರಿಂದಲೇ ನಾವು ಶಾಲೆಗಳನ್ನು ತೆರೆಯುವ ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.

ಶಾಲೆಗಳ ಆರಂಭದ ಬಗ್ಗೆ ನಾನು ಹಠ ಹಿಡಿದಿಲ್ಲ. ಮಕ್ಕಳ ಭದ್ರತೆ ಬಗ್ಗೆ ನಮಗೂ ನಿಗಾ ಇದೆ. ಶಾಲೆ ಆರಂಭದ ವಿಚಾರದಲ್ಲಿ ಸರ್ಕಾರ ಪ್ರತಿಷ್ಠೆ ತೋರಿಸುತ್ತಿಲ್ಲ. ಎಲ್ಲರೂ ಕೇವಲ ಬೆಂಗಳೂರು ಕೇಂದ್ರಿತವಾಗಿ ನೋಡಬೇಡಿ. ಗ್ರಾಮೀಣಾ ಪ್ರದೇಶಗಳಲ್ಲಿ ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ಹೆಚ್ಚುತ್ತಿರುವ ಕಾರಣ ಶಾಲೆಗಳನ್ನು ಆರಂಭಿಸಲಾಗುತ್ತಿದೆ ಎಂದರು.

TRENDING