Thursday, January 21, 2021
Home ರಾಜಕೀಯ ರಾಜ್ಯದ ಜನರ ಬಗ್ಗೆ ಕಾಳಜಿ ಇಲ್ಲದ ನಾಲಾಯಕ್ ಮಂತ್ರಿ : ಸುಧಾಕರ್ ವಿರುದ್ಧ ಡಿ.ಕೆ. ಸುರೇಶ್...

ಇದೀಗ ಬಂದ ಸುದ್ದಿ

ರಾಜ್ಯದ ಜನರ ಬಗ್ಗೆ ಕಾಳಜಿ ಇಲ್ಲದ ನಾಲಾಯಕ್ ಮಂತ್ರಿ : ಸುಧಾಕರ್ ವಿರುದ್ಧ ಡಿ.ಕೆ. ಸುರೇಶ್ ವಾಗ್ದಾಳಿ

ಬೆಂಗಳೂರು : ಶ್ರೀರಾಮುಲು ಅವರನ್ನು ಮುಗಿಸಿದವರು ಸಚಿವ ಸುಧಾಕರ್ ಆಮೇಲೆ ಎರಡೂ ಖಾತೆ ಮರ್ಜ್ ಮಾಡಿಕೊಂಡು ಸುಮ್ಮನೆ ಕೂತಿದ್ದಾರೆ. ಮೋಜಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಏನ್ ನಿರ್ಧಾರ ತೆಗೆದುಕೋಳ್ಳುತ್ತಾರೆ ಅವರಿಗೇ ಗೊತ್ತಿಲ್ಲ ಎಂದು ಸಂಸದ ಡಿ.ಕೆ. ಸುರೇಶ್ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮುಲು ಅವರನ್ನು ಮುಗಿಸಿದವರು ಸುಧಾಕರ್, ಅವರು ಏನು ಮಾಡಿದರೂ ನಡೆಯುತ್ತೆ ಎನ್ನುವಂತಾಗಿದೆ. ಲಸಿಕೆ ಬಂದಿದೆ ಅಂದ್ಮೇಲೆ ಎರಡನೇ ವೈರಸ್ ಹೇಗೆ ಬರುತ್ತೆ? ರಾಜ್ಯದ ಜನರ ಬಗ್ಗೆ ಕಾಳಜಿ ಇಲ್ಲದಂತ ನಾಲಾಯಕ್ ಮಂತ್ರಿ ಇವರು ಎಂದು ಸಚಿವ ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಏಕ ಚಕ್ರಾಧಿಪತ್ಯ ನಡೆಸುತ್ತಿದೆ. ಬಿಜೆಪಿ ಸರ್ಕಾರಕ್ಕೆ ವಿಪಕ್ಷಗಳ ಜೊತೆ ಯಾವ ರೀತಿ ಸಹಕಾರ ಕೇಳಬೇಕು ಎಂಬುದೇ ಗೊತ್ತಿಲ್ಲ ಇವರ ಹಗರಣಗಳನ್ನು ಎತ್ತಿ ತೋರಿಸಲಿಲ್ಲ ಎಂದರೆ ನಾವು ಇವರಿಗೆ ಒಳ್ಳೆಯವರು, ಹಗರಣದ ವಿಚಾರ ತೆಗೆದರೆ ಇವರಿಗೆ ನಾವು ಒಳ್ಳೆಯವರಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.

 

TRENDING