Saturday, January 23, 2021
Home ಅಂತರ್ ರಾಷ್ಟ್ರೀಯ ಗಣರಾಜ್ಯೋತ್ಸವಕ್ಕೆ ಬ್ರಿಟನ್ ಪ್ರಧಾನಿಗೆ ಆಹ್ವಾನ ನೀಡಿದ್ದು ಸರಿಯೇ.. ? : ಕೇಂದ್ರಕ್ಕೆ ಶಿವಸೇನೆ...

ಇದೀಗ ಬಂದ ಸುದ್ದಿ

ಗಣರಾಜ್ಯೋತ್ಸವಕ್ಕೆ ಬ್ರಿಟನ್ ಪ್ರಧಾನಿಗೆ ಆಹ್ವಾನ ನೀಡಿದ್ದು ಸರಿಯೇ.. ? : ಕೇಂದ್ರಕ್ಕೆ ಶಿವಸೇನೆ ಪ್ರಶ್ನೆ

 ಮುಂಬೈ,ಡಿ.23- ಕೊರೊನಾ 2ನೇ ಅಲೆ ವ್ಯಾಪಿಸುತ್ತಿರುವ ಸಂದರ್ಭದಲ್ಲೇ ಮುಂದಿನ ಜ.26ರಂದು ನಡೆಯುವ ಗಣರಾಜ್ಯೋತ್ಸವಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಭಾರತ ಭೇಟಿಗೆ ಅವಕಾಶ ನೀಡುವುದು ಸರಿಯೇ ಎಂದು ಶಿವಸೇನೆ ಕೇಂದ್ರವನ್ನು ಪ್ರಶ್ನಿಸಿದೆ. ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ ಬ್ರಿಟನ್‍ನಲ್ಲಿ(ಯುನೈಟೆಡ್ ಕಿಂಗ್‍ಡಂ) ಕಂಡುಬಂದಿರುವ ಸಾಂಕ್ರಾಮಿಕ ಕೋವಿಡ್ 2ನೇ ಅಲೆಯ ಬಗ್ಗೆ ಪ್ರಸ್ತಾಪಿಸಿ ಎಚ್ಚರಿಕೆ ನೀಡಿದೆ.

ಇಡೀ ವಿಶ್ವವೇ ಬ್ರಿಟನ್‍ನಿಂದ ಹೊರಹೋಗುವ-ಬರುವ ವಿಮಾನಗಳನ್ನು ಬಂದ್ ಮಾಡಿವೆ. ಹೀಗಿರುವಾಗ ಮುಂಬರುವ ಗಣರಾಜ್ಯೋತ್ಸವಕ್ಕಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಭಾರತಕ್ಕೆ ಭೇಟಿ ನೀಡಲು ಅವಕಾಶ ನೀಡುವುದು ಸರಿಯೇ ಎಂದು ಪ್ರಶ್ನಿಸಿದೆ.

ಭಾರತವೂ ಸಹ ಡಿ.31 ರವರೆಗೆ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಿದೆ. ಬ್ರಿಟನ್‍ನಿಂದ ಇಲ್ಲಿಗೆ ಬರುವ ಜನರನ್ನು ಕಡ್ಡಾಯವಾಗಿ 14 ದಿನಗಳ ಹೋಂ ಕ್ವಾರಂಟೈನ್‍ಗೆ ಒಳಪಡಿಸುವುದು ಸರಿಯೇ.. ಜನವರಿ 26 ರಂದು ಗಣರಾಜ್ಯೋತ್ಸವಕ್ಕಾಗಿ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಆಹ್ವಾನಿಸಲಾಗಿದೆ. ಕೋವಿಡ್ 2ರ ಅಲೆಯ ನಡುವೆಯೂ ಬ್ರಿಟಿಷ್ ಪಿಎಂ ಜಾನ್ಸನ್ ಭಾರತಕ್ಕೆ ಬರುತ್ತಾರೆಯೇ? ಪ್ರಶ್ನಿಸಿದೆ.

ಈ ಹಿಂದೆ ಅಹಮದಾಬಾದ್‍ನಲ್ಲಿ ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮದ ಸಂದರ್ಭದಲ್ಲಿ ಕರೋನವೈರಸ್‍ನಿಂದಾಗಿ ಹಲವಾರು ಮಂದಿ ತೊಂದರೆಗೀಡಾದರು. ಈಗ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್, ಟ್ರಂಪ್‍ನಂತಲ್ಲ. ಅವರು ಏನು ಮಾಡುತ್ತಾರೆ? ಭಾರತ ಭೇಟಿ ರದ್ದುಪಡಿಸುತ್ತಾರೆಯೇ? ಎಂಬುದೇ ಮುಖ್ಯವಾಗಿದೆ ಈಗ ಎಂದಿದೆ.

TRENDING