Thursday, January 21, 2021
Home ದೇಶ ಪ್ರಸಿದ್ಧ ಪುರಿ ಜಗನ್ನಾಥ ಮಂದಿರ ಇಂದಿನಿಂದ ಭಕ್ತರ ದರ್ಶನಕ್ಕೆ ಮುಕ್ತ

ಇದೀಗ ಬಂದ ಸುದ್ದಿ

ಪ್ರಸಿದ್ಧ ಪುರಿ ಜಗನ್ನಾಥ ಮಂದಿರ ಇಂದಿನಿಂದ ಭಕ್ತರ ದರ್ಶನಕ್ಕೆ ಮುಕ್ತ

ಭುವನೇಶ್ವರ: ಕೊರೋನಾ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ 25ರಿಂದ ಮುಚ್ಚಿದ್ದ ಒಡಿಶಾದ ಪ್ರಸಿದ್ಧ ಯಾತ್ರಾ ಸ್ಥಳ ಪುರಿ ಜಗನ್ನಾಥ ಮಂದಿರ ಬುಧವಾರ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ.

12ನೇ ಶತಮಾನದ ದೇಶದ ಪ್ರಸಿದ್ಧ ಯಾತ್ರಾಸ್ಥಳ ಪುರಿ ಜಗನ್ನಾಥ ದೇವಾಲಯಕ್ಕೆ ಭಕ್ತಾದಿಗಳ ಪ್ರವೇಶವನ್ನು ಮಾರ್ಚ್ 25ರಂದು ಮುಚ್ಚಲಾಗಿತ್ತು.

ಕಳೆದ ತಿಂಗಳು ಶ್ರೀ ಜಗನ್ನಾಥ ದೇವಸ್ಥಾನದ ಆಡಳಿತ ಮುಖ್ಯಸ್ಥ ಅಧಿಕಾರಿ ಕೃಷನ್ ಕುಮಾರ್, ಕೋವಿಡ್-19 ಶಿಷ್ಠಾಚಾರಗಳನ್ನು ಪಾಲಿಸಿಕೊಂಡು ಇಂದಿನಿಂದ ಹಂತಹಂತವಾಗಿ ದೇವಸ್ಥಾನದ ಬಾಗಿಲು ಭಕ್ತರಿಗೆ ದರ್ಶನಕ್ಕೆ ಮುಕ್ತವಾಗಿದೆ ಎಂದರು.

TRENDING