Tuesday, January 26, 2021
Home ಸುದ್ದಿ ಜಾಲ ಅರ್ನಬ್ ಗೋಸ್ವಾಮಿ ಚಾನಲ್ ಗೆ 20 ಲಕ್ಷ ರೂ. ದಂಡ..!

ಇದೀಗ ಬಂದ ಸುದ್ದಿ

ಅರ್ನಬ್ ಗೋಸ್ವಾಮಿ ಚಾನಲ್ ಗೆ 20 ಲಕ್ಷ ರೂ. ದಂಡ..!

ಪಾಕಿಸ್ತಾನದ ಜನರ ವಿರುದ್ಧ ದ್ವೇಷ ಬಿತ್ತುವ ಕಾರ್ಯ ಮಾಡಿದೆ ಎಂಬ ಆರೋಪದಡಿಯಲ್ಲಿ ಬ್ರಿಟನ್​​ನಲ್ಲಿ ಅರ್ನಬ್​ ಗೋಸ್ವಾಮಿ ಮಾಲೀಕತ್ವದ ರಿಪಬ್ಲಿಕ್​ ಭಾರತ್​ಗೆ ಬರೋಬ್ಬರಿ 19,79,327.32 ರೂಪಾಯಿ ದಂಡ ವಿಧಿಸಲಾಗಿದೆ. ಯುಕೆ ಪ್ರಸಾರ ನಿಯಂತ್ರಕರು ಈ ದಂಡವನ್ನ ವಿಧಿಸಿದ್ದಾರೆ.

ರಿಪಬ್ಲಿಕ್​ ಭಾರತ್​ ಲೈಸೆನ್ಸ್ ಹೊಂದಿರುವ ವರ್ಲ್ಡ್​ ವೀವ್​​ ಮೀಡಿಯಾ ನೆಟ್​​ವರ್ಕ್​ ಲಿಮಿಟೆಡ್​​ಗೆ ಮಂಗಳವಾರ ಆಫ್​ಕಾಮ್​​​ 20 ಲಕ್ಷ ರೂಪಾಯಿ ದಂಡ ವಿಧಿಸಿದೆ. ಬ್ರಿಟನ್​​ನಲ್ಲಿರುವ ಹಿಂದಿ ಮಾತನಾಡುವ ಜನರನ್ನ ಗುರಿಯಾಗಿಸಿ ದ್ವೇಷದ ಬೀಜ ಬಿತ್ತುವ ಮೂಲಕ ಆಫ್​ಕಾಮ್​ ಬ್ರಾಡ್​ಕಾಸ್ಟಿಂಗ್​ ಕೋಡ್​ ನಿಯಮಗಳನ್ನ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಅರ್ನಬ್​ ಗೋಸ್ವಾಮಿ ನಿರೂಪಣೆ ಮಾಡಿದ ‘ಪೂಚತಾ ಹೈ ಭಾರತ್’ ಎಂಬ ಕಾರ್ಯಕ್ರಮದ 6 ಸೆಪ್ಟೆಂಬರ್​ 2019ರ ವರದಿಯನ್ನ ಆಧರಿಸಿ ಈ ದಂಡವನ್ನ ವಿಧಿಸಲಾಗಿದೆ. ಇದು ಪಾಕಿಸ್ತಾನದ ಜನರ ಮೇಲೆ ನಡೆದ ನಿರಂತರ ಹಾಗೂ ಪುನರಾರ್ತಿತ ದಾಳಿ ಎಂದು ಆಫ್​ಕಾಮ್​ ಹೇಳಿದೆ.

TRENDING