Tuesday, January 26, 2021
Home ಸುದ್ದಿ ಜಾಲ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಮ್‌ ಇಂಡಿಯಾದ ಕ್ರಿಕೆಟಿಗ ಯಜುವೇಂದ್ರ ಚಹಾಲ್

ಇದೀಗ ಬಂದ ಸುದ್ದಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಮ್‌ ಇಂಡಿಯಾದ ಕ್ರಿಕೆಟಿಗ ಯಜುವೇಂದ್ರ ಚಹಾಲ್

 ಗುರುಗ್ರಾಮ: ಟೀಮ್‌ ಇಂಡಿಯಾದ ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಮಂಗಳವಾರ ನೃತ್ಯ ಸಂಯೋಜಕಿ ಧನಶ್ರೀ ವರ್ಮ ಅವರೊಂದಿಗೆ ದಾಂಪತ್ಯ ಬದುಕಿಗೆ ಅಡಿಯಿರಿಸಿದರು.

ಗುರುಗ್ರಾಮದ ಕರ್ಮ ಲೇಕ್ ರೆಸಾರ್ಟ್ ನಲ್ಲಿ ಹಿಂದೂ ಸಂಪ್ರದಾಯದಂತೆ ಚಹಾಲ್ ಅವರು ಧನಶ್ರೀ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇದೀಗ ಇವರ ವಿವಾಹದ ಫೋಟೋಗಳು ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು , ಧನಶ್ರೀ ಲೆಹಾಂಗದಲ್ಲಿ ಮಿಂಚಿದರೆ,ಚಹಾಲ್ ಶೆರ್ವಾನಿಯಲ್ಲಿ ಕಾಣಿಸಿಕೊಂಡರು.

 ನಂತರಮಾಧ್ಯಮದೊಂದಿಗೆ ಮಾತನಾಡಿದ ಧನಶ್ರೀ , ಚಹಾಲ್ ಲಾಕ್ ಡೌನ್ ವೇಳೆ ಪರಿಚಿತರಾದರು. ಅವರು ನನ್ನ ಕೆಲಸದ ಕುರಿತು ತಿಳಿದುಕೊಂಡಿದ್ದರು. ಈ ವೇಳೆ ಡ್ಯಾನ್ಸ್ ತರಗತಿಗಳನ್ನು ಕೂಡ ನಡೆಸಿಕೊಟ್ಟಿದ್ದೇನೆ. ನಂತರ ಪರಿಚಯ ಪ್ರೇಮಕ್ಕೆ ತಿರುಗಿ ಈಗ ವಿವಾಹವಾಗಿದೆ ಎಂದಿದ್ದಾರೆ.

TRENDING