Saturday, January 16, 2021
Home ಜಿಲ್ಲೆ ಕೊಪ್ಪಳ ಗ್ರಾ. ಪಂಚಾಯತ್ ಚುನಾವಣೆ : ಮೊದಲ ಹಂತದಲ್ಲಿ ಚುನಾವಣೆ ಶೇ 82 ರಷ್ಟು ಮತದಾನ

ಇದೀಗ ಬಂದ ಸುದ್ದಿ

ಗ್ರಾ. ಪಂಚಾಯತ್ ಚುನಾವಣೆ : ಮೊದಲ ಹಂತದಲ್ಲಿ ಚುನಾವಣೆ ಶೇ 82 ರಷ್ಟು ಮತದಾನ

ಕೊಪ್ಪಳ : ಕೊಪ್ಪಳ ಜಿಲ್ಲೆಯ ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆ ಬಹುತೇಕ ಶಾಂತಿಯುತವಾಗಿ ಮುಗಿದಿದ್ದು ಶೇ 82 ರಷ್ಟು ಮತದಾನವಾದ ವರದಿಯಾಗಿದೆ.

ಮೊದಲ ಹಂತದಲ್ಲಿ ಜಿಲ್ಲೆಯ ಮೂರು ತಾಲೂಕಿನ 73 ಗ್ರಾಮ ಪಂಚಾಯತ್ ಗೆ ಚುನಾವಣೆ ನಡೆದಿದ್ದು ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ.

ಫಲಿತಾಂಶಕ್ಕೆ ಡಿಸೇಂಬರ್ 30 ರ ವರೆಗೂ ಅಭ್ಯರ್ಥಿಗಳು ಕಾಯಬೇಕಿದೆ. ಇನ್ನುಳಿದ ಕಾರಟಗಿ, ಗಂಗಾವತಿ, ಕುಷ್ಟಗಿ, ಕನಕಗಿರಿ ಈ  ನಾಲ್ಕು ತಾಲೂಕಿನ ಗ್ರಾಮ ಪಂಚಾಯತ್ ಚುನಾವಣೆ ಎರಡನೇ ಹಂತದಲ್ಲಿ ಇದೆ ಡಿಸೇಂಬರ್ 27 ಕ್ಕೆ ನಡೆಯಲಿದೆ.

ಈರಯ್ಯ ಕುರ್ತಕೋಟಿ

ದಿ ನ್ಯೂಸ್ 24 ಕೊಪ್ಪಳ

TRENDING