Saturday, January 16, 2021
Home ಕೋವಿಡ್-19 ಬ್ರಿಟನ್‌ನಿಂದ ಜಿಲ್ಲೆಗೆ ಬಂದಿರುವ ಐವರಿಗೆ ಕ್ವಾರಂಟೈನ್

ಇದೀಗ ಬಂದ ಸುದ್ದಿ

ಬ್ರಿಟನ್‌ನಿಂದ ಜಿಲ್ಲೆಗೆ ಬಂದಿರುವ ಐವರಿಗೆ ಕ್ವಾರಂಟೈನ್

 ಕಲಬುರ್ಗಿಕೋವಿಡ್‌ ಹೆಚ್ಚು ವ್ಯಾಪಕವಾಗಿ ಹರಡಿರುವ ಬ್ರಿಟನ್‌ನಿಂದ ಜಿಲ್ಲೆಗೆ ಬಂದಿರುವ ಐದು ಜನರನ್ನು ನಿಗದಿತ ಮಾನದಂಡಗಳ ಪ್ರಕಾರ ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು, ಈ ಬಗ್ಗೆ ಜನರು ಆತಂಕಕ್ಕೊಳಗಾಗಬಾರದು ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಮನವಿ ಮಾಡಿದ್ದಾರೆ.

ಒಟ್ಟಾರೆ ಏಳು ಜನ ಬ್ರಿಟನ್‌ನಿಂದ ಜಿಲ್ಲೆಗೆ ಬಂದಿದ್ದರು. ಅವರಲ್ಲಿ ಇಬ್ಬರು ಬೀದರ್‌ಗೆ ತೆರಳಿದ್ದಾರೆ. ಉಳಿದ ಐವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂದಿದ್ದಾರೆ.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜಶೇಖರ ಮಾಲಿ, ‘ಡಿಸೆಂಬರ್ 6, 8, 16 ಹಾಗೂ 18ರಂದು ಐವರು ಜಿಲ್ಲೆಗೆ ಬಂದಿದ್ದಾರೆ. ಅವರಲ್ಲಿ ಒಬ್ಬ ವಿದ್ಯಾರ್ಥಿ ಲಂಡನ್‌ನಲ್ಲಿದ್ದರು. ಉಳಿದವರು ಬ್ರಿಟನ್‌ನ ಬೇರೆಡೆ ಇದ್ದರು. ಅವರನ್ನು ಇದೇ 23ರಂದು ಮತ್ತೊಮ್ಮೆ ಕೋವಿಡ್‌ ಆರ್‌ಟಿ-ಪಿಸಿಆರ್‌ ಪರೀಕ್ಷೆ ಮಾಡಿಸಲಾಗುವುದು ಎಂದರು.

TRENDING