Sunday, January 24, 2021
Home ದೇಶ ವಯಸ್ಕರು ಸ್ವಂತ ಇಚ್ಛೆಯಂತೆ ಮದುವೆಯಾದರೆ 'ಯಾರೂ ಹಸ್ತಕ್ಷೇಪ' ಮಾಡಲು ಸಾಧ್ಯವಿಲ್ಲ: ಕಲ್ಕತ್ತಾ ಹೈಕೋರ್ಟ್

ಇದೀಗ ಬಂದ ಸುದ್ದಿ

ವಯಸ್ಕರು ಸ್ವಂತ ಇಚ್ಛೆಯಂತೆ ಮದುವೆಯಾದರೆ ‘ಯಾರೂ ಹಸ್ತಕ್ಷೇಪ’ ಮಾಡಲು ಸಾಧ್ಯವಿಲ್ಲ: ಕಲ್ಕತ್ತಾ ಹೈಕೋರ್ಟ್

 ಕಲ್ಕತ್ತಾ: ವಯಸ್ಕರೊಬ್ಬರು ತಮ್ಮ ಇಚ್ಛೆಯಂತೆ ವಿವಾಹವಾಗುವುದರಿಂದ ಮತ್ತು ಮತಾಂತರಗೊಳ್ಳಲು ನಿರ್ಧರಿಸಿದರೆ ಯಾವುದೇ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್, ಹೇಳಿದೆ. ಬೇರೆ ಧರ್ಮದ ವ್ಯಕ್ತಿಯನ್ನು ಮದುವೆಯಾಗಲು ತನ್ನ ಮಗಳು ಅನಗತ್ಯವಾಗಿ ಪ್ರಭಾವಿತಳಾಗಿದ್ದಾಳೆಂದು ತಂದೆ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಕಲ್ಕತ್ತಾ ಹೈಕೋರ್ಟ್, ವಯಸ್ಕನೊಬ್ಬ ತನ್ನ ಆಯ್ಕೆಯ ಪ್ರಕಾರ ಮದುವೆಯಾಗಿ ಮತಾಂತರಗೊಳ್ಳಲು ನಿರ್ಧರಿಸಿದರೆ ಯಾವುದೇ ಹಸ್ತಕ್ಷೇಪವಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.19 ವರ್ಷದ ಮಹಿಳೆ ತನ್ನ ಆಯ್ಕೆಯ ವ್ಯಕ್ತಿಯನ್ನು ಮದುವೆಯಾದ ನಂತರ, ಆಕೆಯ ತಂದೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದರು, ಮ್ಯಾಜಿಸ್ಟ್ರೇಟ್ ಮುಂದೆ ತನ್ನ ಮಗಳ ಹೇಳಿಕೆಯನ್ನು ದಾಖಲಿಸಲಾಗಿಲ್ಲ ಎಂದು ನ್ಯಾಯಾಲದಲ್ಲಿ ಹೇಳಿದ್ದರು.

ಇದೇ ವೇಳೆ ತಂದೆ ನೀಡಿದ ಎಫ್ ಐಆರ್ ಆಧರಿಸಿ ಪೊಲೀಸರು ಮಹಿಳೆಯನ್ನು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದು, ಆಕೆ ತಾನು ಸ್ವಂತ ಇಚ್ಛೆಯಿಂದ ಮದುವೆಯಾಗಿರುವುದಾಗಿ ಹೇಳಿಕೆ ನೀಡಿದ್ದರು. ಇದೇ ವೇಳೆ ನ್ಯಾಯಾಪೀಠ ‘ವಯಸ್ಕನೊಬ್ಬ ತನ್ನ ಇಚ್ಛೆಯಂತೆ ಮದುವೆಯಾಗಿ, ಮತಾಂತರಕ್ಕೆ ನಿರ್ಧಾರ ಮಾಡಿದರೆ ಯಾವುದೇ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ’ ಎಂದು ನ್ಯಾಯಮೂರ್ತಿಗಳಾದ ಸಂಜೀಬ್ ಬ್ಯಾನರ್ಜಿ ಮತ್ತು ಅರಿಜಿತ್ ಬ್ಯಾನರ್ಜಿ ಅವರನ್ನೊಳಗೊಂಡ ವಿಭಾಗೀಯ ಪೀಠ ಸೋಮವಾರ ಅಭಿಪ್ರಾಯಪಟ್ಟಿದೆ.

TRENDING