Saturday, January 16, 2021
Home ಅಂತರ್ ರಾಷ್ಟ್ರೀಯ ಅಮೆರಿಕ ಜನಸಂಖ್ಯೆಯಲ್ಲಿ ಶೇ 0.35ರಷ್ಟು ಹೆಚ್ಚಳ

ಇದೀಗ ಬಂದ ಸುದ್ದಿ

ಅಮೆರಿಕ ಜನಸಂಖ್ಯೆಯಲ್ಲಿ ಶೇ 0.35ರಷ್ಟು ಹೆಚ್ಚಳ

ವಾಷಿಂಗ್ಟನ್, ಡಿ.23- ಕಳೆದ 120 ವರ್ಷಗಳಲ್ಲಿ ಅಮೆರಿಕದ ಜನಸಂಖ್ಯೆ ಸಣ್ಣ ಮಟ್ಟದಲ್ಲಿ ಏರಿಕೆಯಾಗಿದೆ. ಅಮೆರಿಕ ಸೆನ್ಸಸ್ ಬ್ಯೂರೋ ಬಿಡುಗಡೆ ಮಾಡಿರುವ ವರದಿಯನುಗುಣವಾಗಿ ಇಡೀ ದೇಶದಲ್ಲಿ ಸಣ್ಣ ಪ್ರಮಾಣದಲ್ಲಿ ವಲಸಿಗರ ಆಗಮನದಿಂದ ಜನಸಂಖ್ಯೆ ಏರಿಕೆಯಾಗಿದೆ ಎಂದು ತಿಳಿಸಲಾಗಿದೆ.

ವಲಸೆ ನಿರ್ಬಂಧ ಮತ್ತು ಬೆಳವಣಿಗೆ ಕುಸಿತದಿಂದಾಗಿ ಕಳೆದ ಹಲವಾರು ವರ್ಷಗಳಿಂದ ಅಮೆರಿಕದಲ್ಲಿ ಜನಸಂಖ್ಯೆ ಬೆಳವಣಿಗೆ ನಿಶ್ಚಲವಾಗಿತ್ತು. ಆದರೆ, ಕೊರೊನಾ ವೈರಸ್ ಸಂಬಂಧಿತ ಸಾವುಗಳು ಮತ್ತು ವೈರಾಣು ಹೆಚ್ಚಳ ಹಿನ್ನೆಲೆಯಲ್ಲಿ ಜನಸಂಖ್ಯೆ ಮತ್ತಷ್ಟು ಕ್ಷೀಣಿಸಿದೆ. ಕೊರೊನಾ ಹಾವಳಿ ಜನಸಂಖ್ಯೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಬಹುದು ಎಂದು ದಿ ಬ್ರೂಕಿಂಗ್ ಇನ್ಸ್‍ಟಿಟ್ಯೂಷನ್‍ನ ಮೆಟ್ರೋಪಾಲಿಟನ್ ಪಾಲಿಸಿ ಪ್ರೋಗ್ರಾಂನ ಹಿರಿಯ ಸಹವರ್ತಿ ವಿಲಿಯಂ ಫ್ರೇ ಹೇಳಿದ್ದಾರೆ.

ಜನಗಣತಿ ಬ್ಯೂರೋದ ಅಂದಾಜಿನ ಪ್ರಕಾರ, ಜುಲೈ 2019 ರಿಂದ ಜುಲೈ 2020 ರವರೆಗೆ ಯುಎಸ್ ಜನಸಂಖ್ಯೆಯು ಶೇ.0.35 ರಷ್ಟು ಹೆಚ್ಚಳವಾಗಿದೆ. ಇದರ ಪ್ರಕಾರ, ರಾಷ್ಟ್ರದಲ್ಲಿ ಒಟ್ಟಾರೆ ಜನಸಂಖ್ಯೆ ಹೆಚ್ಚಳದ ಪ್ರಮಾಣ 1.1 ಮಿಲಿಯನ್ ಎಂದು ತಿಳಿಸಿದ್ದಾರೆ. ಅಮೆರಿಕದ ಈಶಾನ್ಯ ಮತ್ತು ಮಧ್ಯ ಪಶ್ಚಿಮ ಪ್ರದೇಶಗಳು 2019 ರಿಂದ 2020ರ ವರೆಗೆ ಸಣ್ಣ ಜನಸಂಖ್ಯೆಯ ಕುಸಿತ ಹೊಂದಿದ್ದರೆ, ದಕ್ಷಿಣ ಮತ್ತು ಪಶ್ಚಿಮ ಪ್ರದೇಶಗಳಲ್ಲಿ ಸ್ವಲ್ಪ ಹೆಚ್ಚಳವಾಗಿದೆ.

ರಾಜ್ಯಗಳಲ್ಲಿ ಇಡಾಹೊ ಅತಿದೊಡ್ಡ ಏಕ ವರ್ಷದ ಜನಸಂಖ್ಯೆಯ ಹೆಚ್ಚಳವನ್ನು ಹೊಂದಿದ್ದು, 1.8 ಮಿಲಿಯನ್ ನಿವಾಸಿಗಳಿಗೆ ಶೇ.2.1 ರಷ್ಟು ಏರಿಕೆಯಾಗಿದೆ. ಅದರ ನಂತರ ಅರ್‍ಡೀನಾ 1.8 ಶೇ.ಏರಿಕೆಯಾಗಿದೆ. ನೆವಾಡಾ, ಇದು ಶೇ.1.5 ರಷ್ಟು ಹೆಚ್ಚಾಗಿದೆ. 1.4 ರಷ್ಟು ಬೆಳೆದ ಉತಾಹ್ ಮತ್ತು ಟೆಕ್ಸಾಸ್, ಇದು ಶೇ.1.3ರಷ್ಟು ಹೆಚ್ಚಾಗಿದೆ.

ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಕ್ಯಾಫೋರ್ನಿಯಾ ಸೇರಿದಂತೆ ಹದಿನಾರು ರಾಜ್ಯಗಳಲ್ಲಿ ಜನಸಂಖ್ಯೆ ಕಡಿಮೆಯಾಗಿದೆ. ಇದು ಶೇ.0.18ರಷ್ಟು ಇಳಿದು 39.3 ಮಿಲಿಯನ್ ನಿವಾಸಿಗಳಿಗೆ ತಲುಪಿದೆ.ನ್ಯೂಯಾರ್ಕ್- ವಸಂತ ಕಾಲದಲ್ಲಿ ಸಾಂಕ್ರಾ ಮಿಕ ಕೇಂದ್ರಬಿಂದುವಾಗಿದೆ. ರಾಷ್ಟ್ರದ ಅತಿದೊಡ್ಡ ಕುಸಿತವನ್ನು ಹೊಂದಿದೆ. ಅಂದಾಜು 1,26,000 ನಿವಾಸಿಗಳನ್ನು ಕಳೆದುಕೊಂಡಿತು ಅಥವಾ ಶೇ.0.65 ರಷ್ಟು ಕುಸಿದಿದೆ.

ಅಮೆರಿಕದಲ್ಲಿ ನೆಲೆಸಿರುವ ಪ್ರತಿಯೊಬ್ಬರನ್ನೂ ಜನಗಣತಿಯಲ್ಲಿ ಸೇರಿಸಲಾಗಿದೆ. ಆದರೆ, ಈಗ ಕೊರೊನಾ ಹಾವಳಿ ನಿರ್ಮೂಲನೆಯಾದ ನಂತರ ನಿಖರ ಮಾಹಿತಿ ಸಿಗಲಿವೆ ಎಂದು ಹೇಳಿದ್ದಾರೆ.

TRENDING