Monday, January 25, 2021
Home ಜಿಲ್ಲೆ ಮೈಸೂರು ಗ್ರಾಮ ಪಂಚಾಯತ್ ಚುನಾವಣೆ : ಕೊರೋನಾ ನಿಯಮಾನುಸಾರ ನಡೆದ ಮತದಾನ

ಇದೀಗ ಬಂದ ಸುದ್ದಿ

ಗ್ರಾಮ ಪಂಚಾಯತ್ ಚುನಾವಣೆ : ಕೊರೋನಾ ನಿಯಮಾನುಸಾರ ನಡೆದ ಮತದಾನ

ಮೈಸೂರು: ಇಂದು ಗ್ರಾಮಪಂಚಾಯತ್ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಮೈಸೂರು ಜಿಲ್ಲೆಯ ಗಿರಿಜನ ಹಾಡಿಗಳಲ್ಲೂ ಗ್ರಾ.ಪಂ. ಚುನಾವಣೆಯಲ್ಲಿ  ಮತದಾರರ ಉತ್ಸಾಹ ಕಂಡು ಬಂದಿದೆ. ಗಿರಿಜನ ಮತದಾರರು ಮತಗಟ್ಟೆಗಳತ್ತ ಧಾವಿಸಿ ಉತ್ಸಹದಿಂದ ಮತ ಚಲಾಯಿಸುತ್ತಿದ್ದಾರೆ.

ವೀರನಹೊಸಳ್ಳಿ, ಗುರುಪುರ, ನಾಗಪುರ ಹಾಡಿ ನಿವಾಸಿಗಳು ಮತದಾನ ಮಾಡುತ್ತಿದ್ದು ಮಧ್ಯಾಹ್ನದ ವೇಳೆಗೆ ವೋಟಿಂಗ್  ಬಿರುಸುಗೊಂಡಿದೆ. ಮತಗಟ್ಟೆಗಳಲ್ಲಿ ಗಿರಿಜನ ಮತದಾರರಿಗೆ ಮತ ಹಾಕಲು ಮತಗಟ್ಟೆ ಅಧಿಕಾರಿಗಳು ಮಾರ್ಗದರ್ಶನ ಮಾಡುತ್ತಿದ್ದಾರೆ.

ಇನ್ನು ನಾಗಾಪುರದ ಹಿರಿಯ ಮಹಿಳೆ 95 ವರ್ಷದ ಪುಟ್ಟಮ್ಮನಿಂದ ಮತದಾನ ಮಾಡಿದ್ದು, ಮಧ್ಯಾಹ್ನದ ವೇಳೆಗೆ ಮತದಾನ ಮತ್ತಷ್ಟು ಬಿರುಸುಗೊಂಡಿದೆ. ಹುಣಸೂರು ತಾಲೂಕಿನ ಹಾಡಿಗಳ ಮಕ್ಕಳಿಗೆ ಕೋವಿಡ್ ಜಾಗೃತಿ ಮೂಡಿಸಲಾಗುತ್ತಿದೆ.  ಹಕ್ಕು ಚಲಾಯಿಸಲು ಬರುವ ಪ್ರತಿಯೊಬ್ಬರಿಗೂ ಸ್ಯಾನಟೈಸರ್, ಥರ್ಮಲ್ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದೆ.

TRENDING