ಕೋಲ್ಕತ್ತಾ: ಬ್ರಿಟನ್ ಕೊರೊನಾ ಭಾರತಕ್ಕೆ ಬಂದಿದ್ದು, ಯುಕೆಯಿಂದ ಬಂದ ಇಬ್ಬರಲ್ಲಿ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಪರ್ಕಿತರನ್ನ ಪತ್ತೆ ಹಚ್ಚಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಅಧಿಕೃತ ಮಾಹಿತಿ ನೀಡಿದೆ.
ರೂಪಾಂತರಗೊಂಡ ಕೊರೊನಾ ವೈರಸ್ ಕೊನೆಗೂ ಭಾರತಕ್ಕೆ ವಕ್ಕರಿಸಿದೆ. ಆದ್ರೆ, ಸರ್ಕಾರ ಈ ಬಗ್ಗೆ ಜನ ಆತಂಕ ಪಡುವ ಆಗತ್ಯವಿಲ್ಲ. ಬ್ರಿಟನ್ʼನಿಂದ ಬರುವವರಿಗೆಲ್ಲ 14 ದಿನಗಳ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ ಎಂದಿದೆ.