Wednesday, January 27, 2021
Home ಅಂತರ್ ರಾಷ್ಟ್ರೀಯ ಅಮೆರಿಕಾ : ಪ್ರಪ್ರಥಮ ಕೊರೊನಾ ವಾಕ್ಸಿನ್ ಪಡೆದ ಶಿರಾ ಮೂಲದ ವೈದ್ಯ

ಇದೀಗ ಬಂದ ಸುದ್ದಿ

ಅಮೆರಿಕಾ : ಪ್ರಪ್ರಥಮ ಕೊರೊನಾ ವಾಕ್ಸಿನ್ ಪಡೆದ ಶಿರಾ ಮೂಲದ ವೈದ್ಯ

ಪ್ರಪ್ರಥಮ ಕೊರೊನಾ ವಾಕ್ಸಿನ್ ಪಡೆದ ಶಿರಾ ಮೂಲದ ವೈದ್ಯ

ಅಮೆರಿಕಾದ ಅಗಸ್ಟಾದಲ್ಲಿ ವೈದ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ವೈದ್ಯ.

ಕೋವಿಡ್ ಸಮಯದಲ್ಲಿ ಬಹಳಷ್ಟು ರೋಗಿಗಳಿಗೆ ಚಿಕಿತ್ಸೆ ನೀಡಿದ ವೈದ್ಯ.

ಅಮೆರಿಕಾದ ಜಾರ್ಜಿಯಾ ರಾಜ್ಯದ ಅಗಸ್ಟಾದಲ್ಲಿ ಕನ್ನಡಿಗ,

ಕೊರೊನಾ ವಾರಿಯರ್ ಡಾ.ಅರುಣ್ ರಂಗನಾಥ್ ಮೊದಲ ಹಂತದಲ್ಲಿ ಪ್ರಪ್ರಥಮ ಕೊರೊನಾ ವಾಕ್ಸಿನ್ ಪಡೆದುಕೊಂಡಿದ್ದಾರೆ.

ಮೂಲತಃ ಶಿರಾ ನಗರದವರಾಗಿರುವ ವೈದ್ಯ ಡಾ.ಅರುಣ್ ರಂಗನಾಥ್, ಅಮೆರಿಕಾದ ಅಗಸ್ಟಾದಲ್ಲಿ ವೈದ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.

ಕೋವಿಡ್ ಸಮಯದಲ್ಲಿ ಬಹಳಷ್ಟು ರೋಗಿಗಳಿಗೆ ಅರುಣ್ ಚಿಕಿತ್ಸೆ ನೀಡಿದ್ದರು.

ಅರುಣ್ ಅವರ ಸೇವೆ ಗುರುತಿಸಿ  ಅಮೆರಿಕಾ ಸರ್ಕಾರ ಅವರಿಗೆ ಮೊದಲ ಹಂತದಲ್ಲೇ ಕೋವಿಡ್ ಲಸಿಕೆ ನೀಡಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಾ.ಅರುಣ್, ವ್ಯಾಕ್ಸಿನ್​​ನಿಂದ ಯಾವುದೇ ಸೈಡ್ ಎಫೆಕ್ಟ್ ಇಲ್ಲ ಎಂದಿದ್ದಾರೆ.

ಅಲ್ಲದೇ ಕೋವಿಡ್ ವ್ಯಾಕ್ಸಿನ್ ಬಗ್ಗೆ ಭಯ ಬೇಡ ಎಂದು ಸಲಹೆ ನೀಡಿದ್ದಾರೆ.

ವರದಿ ಶ್ರೀಮಂತ್

ದಿ ನ್ಯೂಸ್ 24 ಕನ್ನಡ ಶಿರಾ

TRENDING