ದಾವಣಗೆರೆ: ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮಂಗಳವಾರ ಬೆಳಿಗ್ಗೆ 11ರ ಹೋತ್ತಿಗೆ ಶೇ 18.38 ಮತದಾನವಾಗಿದೆ.
ದಾವಣಗೆರೆ ತಾಲ್ಲೂಕಿನಲ್ಲಿ ಶೇ 23.58 ಹೊನ್ನಾಳಿ ತಾಲ್ಲೂಕಿನಲ್ಲಿ ಶೇ 17.50 ಜಗಳೂರು ತಾಲ್ಲೂಕಿನಲ್ಲಿ ಶೇ 14 ಮತದಾನವಾಗಿದೆ.
ಮೂರು ತಾಲ್ಲೂಕುಗಳ 88 ಗ್ರಾಮ ಪಂಚಾಯಿತಿಗಳಿಗೆ ಮತದಾನ ನಡೆಯುತ್ತಿದ್ದು ಎಲ್ಲಾ ಕಡೆಯಲ್ಲು ಶಾಂತಿಯುತ ಮತದಾನ ನಡೆಯುತ್ತಿದೆ ಇದರ ಜೊತೆಗೆ, ದಾವಣಗೆರೆ ತಾಲೂಕಿನ ಹೆಬ್ಬಾಳು ಗ್ರಾಮಪಂಚಾಯತಿಯಲ್ಲಿ ಬ್ಯಾಲೆಟ್ ನಮೂನೆಗಳು ಅದಲು ಬದಲಾದ ಹಿನ್ನೆಲೆಯಲ್ಲಿ ಮತದಾನ ಆರಂಭವಾಗಿಲ್ಲ.
ಮತಗಟ್ಟೆ ಸಂಖ್ಯೆ 108 ಮತ್ತು 109 ರ ಬ್ಯಾಲೆಟ್ ನಮೂನೆಗಳು ಅದಲು ಬದಲಾಗಿರುವ ಹಿನ್ನೆಲೆಯಲ್ಲಿ ಮತದಾನ ಸ್ಥಗಿತಗೊಂಡಿದ್ದು. ಸ್ಥಳಕ್ಕೆ ದಾವಣಗೆರೆ ತಹಶಿಲ್ದಾರ್ ಗಿರೀಶ್ ಮತ್ತು ಉಪವಿಭಾಧಿಕಾರಿ ಮಮತಾ ಹೊಸಗೌಡರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..