Monday, January 25, 2021
Home ರಾಜ್ಯ ದೆಹಲಿಯ ಪ್ರತಿಭಟನೆಕಾರರು ರೈತರಲ್ಲ, ಅರ್ಬನ್ ನಕ್ಸಲರು : ಸಂಸದೆ ಶೋಭಾ ಕರಂದ್ಲಾಜೆ

ಇದೀಗ ಬಂದ ಸುದ್ದಿ

ದೆಹಲಿಯ ಪ್ರತಿಭಟನೆಕಾರರು ರೈತರಲ್ಲ, ಅರ್ಬನ್ ನಕ್ಸಲರು : ಸಂಸದೆ ಶೋಭಾ ಕರಂದ್ಲಾಜೆ

ಕಾರ್ಕಳ: ಕೇಂದ್ರದ ಪೌರತ್ವ ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದ ‘ತುಕುಡೇ ಗ್ಯಾಂಗ್’ ಇಂದು ಕೇಂದ್ರದ ಕೃಷಿ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನೆ ನಿರತರೆಲ್ಲ ರೈತರಲ್ಲ, ಅರ್ಬನ್ ನಕ್ಸಲರು ಎಂದು ಉಡುಪಿ ಮತ್ತು ಚಿಕ್ಕಮಂಗಳೂರು ಸಂಸದೆ ಶೋಭಾ ಕರಂದ್ಲಾಜೆ ವಾಗ್ಧಾಳಿ ನಡೆಸಿದರು.

ಕಾರ್ಕಳದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಹರಿಯಾಣ ಮತ್ತು ಪಂಜಾಬಿನ ರೈತರು ದೆಹಲಿಯಲ್ಲಿ ರೈತ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಅವರೆಲ್ಲ ನಿಜವಾದ ರೈತರಲ್ಲ ಎಂದರು.

ರಾಜ್ಯದಲ್ಲಿ ಕೂಡ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಅಧಿವೇಶನ ಸಂದರ್ಭ ಹೋರಾಟ ನಡೆಸಿದ್ದರು. ಕೋಡಿಹಳ್ಳಿ ನೇತೃತ್ವದ ರೈತ ಹೋರಾಟ ರಾಜಕೀಯ ಪ್ರೇರಿತ. ಕಾಂಗ್ರೆಸ್ ನಾಯಕರಾದ ಡಿಕೆ ಶಿವಕುಮಾರ್, ಸಿದ್ಧರಾಮಯ್ಯ ಇವರೆಲ್ಲ ಸೇರಿಕೊಂಡು ಸರಕಾರದ ವಿರುದ್ಧ ನಡೆಸಿದ ಪಿತೂರಿ ಎಂದು ಸಂಸದೆ ಹೇಳಿದರು.

ಶಾಸಕ ವಿ.ಸುನೀಲ್ ಕುಮಾರ್, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಪುರಸಭೆ ಅಧ್ಯಕ್ಷೆ ಸುಮಾಕೇಶವ್, ಉಪಾಧ್ಯಕ್ಷೆ ಪಲ್ಲವಿ, ಅನಂತಕೃಷ್ಣ ಶೆಣೈ ಮತ್ತಿತರರು ಉಪಸ್ಥಿತರಿದ್ದರು.

TRENDING